ಸುದ್ದಿ ಬಿಡುಗಡೆ ವರದಿಗಾರ ಮಧು ಪಂಜರಿಗೆ ಜೇಸಿಐ ಪಂಜ ಪಂಚಶ್ರೀ ಗೌರವ

0

ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ

ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ 20 ವರುಷಗಳಿಂದ ಗೌರವ ವರದಿಗಾರರಾಗಿರುವ ಮಧುಸೂಧನ್ ಕೆ ಆರ್ ಪಂಜ ರವರಿಗೆ ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ ‘ಎಫ್’ ವಲಯ 15 ವತಿಯಿಂದ
ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅವರ ಕೃಷ್ಣನಗರ ನಂದನ ನಿಲಯದಲ್ಲಿ ಜು.29 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ವಹಿಸಿದ್ದರು. ಜೇಸಿಐ ಪಂಜ ಪಂಚಶ್ರೀ ಸ್ಥಾಪಕಾಧ್ಯಕ್ಷ JFM ದೇವಿಪ್ರಸಾದ್ ಜಾಕೆ ರವರು ಮಾತನಾಡಿ “ಪಂಜದ ವರದಿಗಳು ಪತ್ರಿಕೆಯಲ್ಲಿ ಪ್ರಸಾರವಾಗಲು ಮುಖ್ಯ ಕಾರಣ ವರದಿಗಾರ ಮಧು ಪಂಜ ರವರು . ಅವರೊಬ್ಬ ನಿಸ್ಪಕ್ಷಪಾತ ಮತ್ತು ಉತ್ತಮ ವರದಿಗಾರ” ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ವಲಯಾಧ್ಯಕ್ಷ JFD ಲೋಕೇಶ್ ಆಕ್ರಿಕಟ್ಟೆ, ಕಾರ್ಯದರ್ಶಿ JFM ಅಶ್ವತ್ ಬಾಬ್ಲುಬೆಟ್ಟು ಕಾರ್ಯಕ್ರಮ ನಿರ್ದೇಶಕರಾದ JFM ಗಗನ್ ತೆಂಕಪಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ JFM ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು.JC ಅಶೋಕ್ ಕುಮಾರ್ ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ JFM ಅಶ್ವತ್ ಬಾಬ್ಲುಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ JFM ಪ್ರವೀಣ ಕುಂಜತ್ತಾಡಿ, JC ಕುಸುಮಾಧರ ಕಕ್ಯಾನ , JFM ಗಗನ್ ತೆಂಕಪ್ಪಾಡಿ, ಮಧು ಪಂಜರವರ ಪತ್ನಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಶ್ರೀಮತಿ ಕವಿತಾ, ಪುತ್ರರಾದ ನಂದನ್, ಪವನ್ ದೀಪ್, ತಾಯಿ ಶ್ರೀಮತಿ ನಳಿನಿ,ಸಹೋದರಿ ಶ್ರೀಮತಿ ಮಾಲಿನಿ ಮೋಹನ್ ಮೆದು, ಬಾವ ಪಂಜ ಅರಣ್ಯ ಇಲಾಖೆಯ ಸಿಬ್ಬಂದಿ ಮೋಹನ್ ಮೆದು, ಪ್ರಣವ್ ಜಾಕೆ, ಗಗನ್ ದೀಪ್ ಮೆದು ಉಪಸ್ಥಿತರಿದ್ದರು.