ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ, ಸಾಮೂಹಿಕ ಅಶ್ಲೇಷ ಬಲಿ, ನೂರಾರು ಮಂದಿ ಭಾಗಿ

0

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.29 ರಂದು ನಾಗರ ಪಂಚಮಿ ಪ್ರಯುಕ್ತ ಸಾಮೂಹಿಕ ಅಶ್ಲೇಷ ಬಲಿ ಪೂಜೆ (ಹೋಮ ಸಹಿತ)ನಡೆಯಿತು..

ನಾಗ ದೇವರಿಗೆ ಕ್ಷೀರಾಭಿಷೇಕ, ಸೀಯಾಳ ಅಭಿಷೇಕ ,
ನಾಗತಂಬಿಲ ನಡೆಸಲಾಯಿತು. ಬಲಿವಾಡು ಕೂಟ, ಸಾಮೂಹಿಕ
ಅಶ್ಲೇಷ ಬಲಿ ಪೂಜೆ ನಡೆಸಲಾಯಿತು.


ವವ್ಯಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಸದಸ್ಯರುಗಳಾದ ಕೇಶವ ಹೊಸೋಳಿಕೆ, ಸನತ್ ಮುಳುಗಾಡು, ಪುರುಷೋತ್ತಮ ಬಡಿಯಡ್ಕ, ಶಿವಪ್ರಸಾದ್ ರುದ್ರಚಾಮುಂಡಿ, ದಯಾನಂದ ಪಟ್ಟೆ, ಶ್ರೀಮತಿ ಶಶಿಕಲಾ ಅಡ್ಡನಪಾರೆ, ಶ್ರೀಮತಿ ಉಷಾ ಮಲ್ಕಜೆ , ಪ್ರಧಾನ ಅರ್ಚಕ ಪರಮೇಶ್ವರ ಭಟ್ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ನೂರಾರು ಮಂದಿ ಭಾಗವಹಿಸಿದ್ದರು.