ಅರಂತೋಡು : ಮನೆಗೆ ಮರಬಿದ್ದು ಹಾನಿ

0


ಭಾರೀ ಗಾಳಿ ಮಳೆಗೆ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದ ಘಟನೆ ಅರಂತೋಡಿನಿಂದ ವರದಿಯಾಗಿದೆ.


ಭಾರೀ ಗಾಳಿಗೆ ಅರಂತೋಡಿನ ಪೋಸ್ಟ್‌ಮ್ಯಾನ್, ಸುದ್ದಿ ಪತ್ರಿಕೆಯ ಏಜೆಂಟ್ ಸುಧಾಕರರವರ ಮನೆಯ ಹಿಂಬದಿ ಇದ್ದ ಮರವೊಂದು ಬುಡಸಮೇತ ಮನೆ ಮೇಲೆ ಬಿದ್ದಿದೆ. ಇದರಿಂದ ಮನೆಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಪಿಡಿಒ ಜಯಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ಶರತ್, ಭೇಟಿ ನೀಡಿದರು.