ಅಪರಾಧ ಮುಕ್ತ ಸಮಾಜದ ನಿರ್ಮಾಣ ವಿನೂತನ ಉಪಕ್ರಮ ಜನಸ್ನೇಹಿ ಪೊಲೀಸ್ ಯೋಜನೆಯ ಉದ್ದೇಶ- ಎಸ್. ಐ. ಸಂತೋಷ್
ಸಾರ್ವಜನಿಕರ
ಹಿತಾಸಕ್ತಿಗಾಗಿ ಪೊಲೀಸ್ ಜನಸ್ನೇಹಿ ಯೋಜನೆ ಜಾರಿ ಮಾಡಲಾಗಿದ್ದು ಗ್ರಾಮದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿ 40-50 ಮನೆಗಳನ್ನು ಸೇರಿಸಿ ಸಮೂಹ ಗುಂಪು ರಚನೆ ಮಾಡಿ ಬಳಿಕ ಗ್ರಾಮದಲ್ಲಿ ಸಮೂಹ ಮನೆಗಳನ್ನು ರಚಿಸಿಕೊಂಡು ಸಭೆ ನಡೆಸಿ ಇಲಾಖೆಗಳ ವಿವಿಧ ಕಾಯಿದೆ ಮತ್ತು ಕಾನೂನಿನ ಮಾಹಿತಿ ನೀಡುವ ಕಾರ್ಯ ಯೋಜನೆ ಇದಾಗಿದೆ. ಸಾರ್ವಜನಿಕರು ಮತ್ತು ಪೊಲೀಸ್ ನವರು ಸಹಭಾಗಿ ತ್ವದಲ್ಲಿರಬೇಕು. ಇಲಾಖೆ ಮೇಲಿನ ಸಾರ್ವಜನಿಕರ ಕೆಟ್ಟ ಮನೋಭಾವನೆ ದೂರ ಮಾಡುವ ಉದ್ದೇಶ ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಉಪಕ್ರಮ ಜನಸ್ನೇಹಿ ಯೋಜನೆ ಇದಾಗಿದೆ ಎಂದು ಸುಳ್ಯ ಪೊಲೀಸ್ ಉಪ ನಿರೀಕ್ಷರಾದ ಸಂತೋಷ್ ರವರು ಮಾಹಿತಿ ನೀಡಿದರು.
ಅಲೆಟ್ಟಿ ಪಂಚಾಯತ್ ಸಭಾಂಗಣದಲ್ಲಿ ಜು. 30 ರಂದು ನಡೆದ ಮನೆ ಮನೆಗೆ ಪೊಲೀಸ್ ಸಂಪರ್ಕ ಕಾರ್ಯಕ್ರಮದ ಪ್ರಥಮ ಹಂತದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.
















ಗ್ರಾಮದಲ್ಲಿಸಮೂಹ ಗುಂಪು ಮನೆ ರಚಿಸಿದ ಬಳಿಕ ಆಯಾಯ ಪ್ರದೇಶದಲ್ಲಿ ಸಭೆ ನಡೆಸಲಾಗುವುದು.
ಪರಿಸರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡುವ ಸಲುವಾಗಿ ಜನರು ಪೊಲೀಸರೊಂದಿಗೆ ಕೈಜೋಡಿಸಬೇಕು. ಗ್ರಾಮದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿರುವ ವ್ಯಕ್ತಿಗಳಿಗೆ ಭದ್ರತೆ ಒದಗಿಸುವುದು.
ಇತ್ತೀಚಿಗೆ ಅಮಾಯಕರು
ಸೈಬರ್ ವಂಚನೆಗೆ ಬಲಿಯಾಗುವ ಪ್ರಕರಣಗಳು ದಿನ ನಿತ್ಯಕಂಡು ಬರುತ್ತಿದ್ದು ಇದಕ್ಕೆ ಕಡಿವಾಣ ಹಾಕುವ ಕೆಲಸವಾಗಬೇಕು. ಇಂತಹ ಪ್ರಕರಣ ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ ಪೊಲೀಸರಿಗೆತಿಳಿಸುವಂತಗಬೇಕು. ಜೀವನದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲಿಲ್ಲ ಎಂದು ಹೇಳುವ ಜನರ ಮನೆಯ ಮೆಟ್ಟಿಲನ್ನು ಪೊಲೀಸ್ ನವರು ಹತ್ತುವ ಮೂಲಕ ಸಾಮಾನ್ಯ ಜನರೊಂದಿಗೆ ಒಡನಾಟ ಬೆಳೆಸಿ ಆತ್ಮ ಸ್ಟೈರ್ಯ ತುಂಬುವ ಯೋಜನೆಗೆ ಇದಾಗಿದೆ.
ಸಮಾಜವನ್ನು ಅಪರಾಧ ಮುಕ್ತ ಸಮಾಜವಾಗಿ ಪರಿವರ್ತಿಸುವ ಸಲುವಾಗಿ ಮನೆ ಮನೆಗೆ ಪೊಲೀಸ್ ಸಂಪರ್ಕದ ಕಾರ್ಯಕ್ರಮವಾಗಿದ್ದು
ಈ ಯೋಜನೆಯ ಯಶಸ್ಸಿಗೆ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಕೇಳಿಕೊಂಡರು.

ಅಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಅಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಕಮಲ ನಾಗಪಟ್ಟಣ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಎ. ಎಸ್. ಐ ತಾರಾನಾಥ್ ರವರು ಸ್ವಾಗತಿಸಿ, ಬೀಟ್ ಪೊಲೀಸ್ ನವೀನ್ ವಂದಿಸಿದರು.
ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.










