ಶ್ರೀಮತಿ ಚಿನ್ನಮ್ಮ ಮರಕ್ಕಡ ನಿಧನ

0

ಕಲ್ಮಡ್ಕ ಗ್ರಾಮದ ಮರಕ್ಕಡ ಶ್ರೀಮತಿ ಚಿನ್ನಮ್ಮ ರವರು ಅಲ್ಪ ಕಾಲದ ಅಸೌಖ್ಯದಿಂದ ಜು.31ರಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವಯಸ್ಸಾಗಿತ್ತು. ಮೃತರು ಪುತ್ರರಾದ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮತ್ತು ಸುದ್ದಿ ಬಿಡುಗಡೆ ಪ್ರತಿಕೆ ಏಜೆಂಟ್ ಧರ್ಮಪಾಲ ಮರಕ್ಕಡ, ವಸಂತ ಮರಕ್ಕಡ, ಜಯರಾಮ ಮರಕ್ಕಡ, ಪುತ್ರಿ ಶ್ರೀಮತಿ ಶೋಭಾ ಸುಬ್ರಹ್ಮಣ್ಯ ಕಣ್ಕಲ್, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ವೇಳೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.