















ಸಾಮಾಜಿಕ ಸೇವೆಯಿಂದ ಮಾನಸಿಕ ನೆಮ್ಮದಿ : ಪುರಂದರ ರೈ
ಇಂಟರ್ಯಾಕ್ಟ್ ಕ್ಲಬ್ ಮೂಲಕ ಮಕ್ಕಳಿಗೆ ಎಳವೆಯಲ್ಲಿಯೇ ಸಾಮಾಜಿಕ ಸೇವೆಯನ್ನು ಕಲಿಸಿಕೊಡಲಾಗುತ್ತದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಆಲೋಚನೆಗಳು ಬೆಳೆಯಲು ಸಹಕಾರಿಯಾಗುತ್ತದೆ ಜೊತೆಗೆ ಮಾನಸಿಕ ನೆಮ್ಮದಿಯೂ ಸಿಗುತ್ತದೆ ಎಂದು ರೋಟರಿ ಕ್ಲಬ್ ನ ಜಿಲ್ಲಾ ಪೂರ್ವ ಸಹಾಯಕ ಗವರ್ನರ್ ಪುರಂದರ ರೈ ಮಿತ್ರoಪಾಡಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರಾಯೋಜಿತ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಗಗನ್ ಎಂ ಎಸ್, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ತುಳಸಿ ಜಿ, ಖಜಾoಜಿಯಾಗಿ ಎಸ್ ಎಸ್ ಎಲ್ ಸಿ ಯ ಶ್ರೀಕಾಂತ್ ಎಂ ಎನ್, ಉಪಾಧ್ಯಕ್ಷರಾಗಿ ಎಸ್ ಎಸ್ ಎಲ್ ಸಿ ಯ ನಿಹಾನ್ ಕೆ ಜಿ, ಜತೆಕಾರ್ಯದರ್ಶಿಯಾಗಿ ಎಸ್ ಎಸ್ ಎಲ್ ಸಿ ಯ ಹಿತಾ ಬಿ, ಕಮ್ಯುನಿಟಿ ಸರ್ವಿಸ್ ಚೆಯರ್ ಮೆನ್ ಆಗಿ ಮಹಮ್ಮದ್ ತಂಜಿಮ್, ಇನ್ಸ್ಟಿಟ್ಯೂಟ್ ಸರ್ವಿಸ್ ಚೆಯರ್ ಮೆನ್ ಆಗಿ ಅದ್ವಿತ್ ಗೌಡ, ಕ್ಲಬ್ ಸರ್ವಿಸ್ ಚೆಯರ್ ಮೆನ್ ಆಗಿ ಮೊಹಮ್ಮದ್ ಫಾಹೀಮ್, ಇಂಟರ್ ನ್ಯಾಷನಲ್ ಸರ್ವಿಸ್ ಚೆಯರ್ ಮೆನ್ ಆಗಿ ಮೊಹಮ್ಮದ್ ಶಮ್ಮಾಸ್ ಅವರಿಗೆ ಬೆಳ್ಳಾರೆ ಟೌನ್ ರೋಟರಿ ಕ್ಲಬ್ ಅಧ್ಯಕ್ಷ ವಿಶ್ವನಾಥ ಕೆ ಪದಪ್ರದಾನಗೈದರು. ನಿರ್ಗಮಿತ ಅಧ್ಯಕ್ಷೆ ಮೇಘನಾ,ಶಿಕ್ಷಕ ಪ್ರತಿನಿಧಿ ಸಂಸ್ಥೆಯ ನಿರ್ದೇಶಕ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ಮಣಿಕ್ಕಾರ, ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನ ಕಾರ್ಯದರ್ಶಿ ವೀರನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಶ್ಮಿತಾ, ವಿದ್ಯಾರ್ಥಿ ಮಹಮ್ಮದ್ ತಂಜೀಮ್ ಅತಿಥಿಗಳನ್ನು ಪರಿಚಯಿಸಿದರು. ಇಂಟರ್ಯಾಕ್ಟ್ ಕ್ಲಬ್ ನ ಚಯರ್ ಮೆನ್ ಎ ಕೆ ಮಣಿಯಾಣಿ ಸ್ವಾಗತಿಸಿದರು. ಕಾರ್ಯದರ್ಶಿ ತುಳಸಿ ಜಿ ವಂದಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು.










