ಕುಮಾರ್ ಪೆರ್ನಾಜೆ, ಸೌಮ್ಯ ದಂಪತಿಗಳು ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿಗೆ ಆಯ್ಕೆ

0

ವಿಶಿಷ್ಟ ವಿಶೇಷ ಬರಹಗಾರ, ಖ್ಯಾತ ಜೇನು ಕೃಷಿಕರಾದ ಶ್ರೀ ಕುಮಾರ್ ಪೆರ್ನಾಜೆ ಮತ್ತು ಶ್ರೀಮತಿ ಸೌಮ್ಯ ಆವರು ಹಲವಾರು ವರ್ಷಗಳಿಂದ ಜೇನು ಕೃಷಿಯಲ್ಲಿ ಮಾಡಿರುವ ಅಪಾರ ಸಾಧನೆಗಾಗಿ “ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ”ಗೆ ಆಯ್ಕೆಯಾಗಿದ್ದಾರೆ. ಆ. ೩ ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ಸಾಹಿತಿಗಳಾದ ಪ್ರಭಾಕರ ಶಿಶಿಲ, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರು, ಹಾ ಮ ಸತೀಶ್ ಬೆಂಗಳೂರು, ನಾರಾಯಣ ರೈ ಕುಕ್ಕುವಳ್ಳಿ, ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇನ್ನಿತರರು ಪ್ರದಾನ ಮಾಡುವರು.

ಚಂದನ ಸಾಹಿತ್ಯ ವೇದಿಕೆಯು ತನ್ನ ೨೦ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ – ೨೦೨೫ ಈ ಸಮಾರಂಭದಲ್ಲಿ ಕುಮಾರ ಪೆರ್ನಾಜೆ ಮತ್ತು ಶ್ರೀಮತಿ ಸೌಮ್ಯ ದಂಪತಿಗಳಿಗೆ ಸುಳ್ಯದ ಚಂದನ ಸಾಹಿತ್ಯ ವೇದಿಕೆಯು ೨೦೨೫ ನೇ ಸಾಲಿನ ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿಯನ್ನು ನೀಡಿ ಗೌರವಿಸುವರು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.