ಉಬರಡ್ಕ ಮಿತ್ತೂರು ಗ್ರಾಮದ ಮನೆ ಮನೆಗೆ ಪೊಲೀಸ್ ಮತ್ತು ಕೋವಿ ಪರವಾನಿಗೆ ತಪಾಸಣೆ ಕಾರ್ಯಕ್ರಮವು ಜುಲೈ 31ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ಸೂoತೋಡುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ಪೋಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ. ಪಿ.ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಕರ್ನಾಟಕ ಸರಕಾರದ ಪೋಲೀಸ್ ಇಲಾಖೆಯ ಜನಸ್ನೇಹಿ ಕಾರ್ಯಕ್ರಮವಾದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಮಾಹಿತಿ ನೀಡಿದರು.
















ಕೋವಿ ಪರವಾನಿಗೆಯ ಬಗ್ಗೆ ಮಾಹಿತಿ ನೀಡಿ ಕೋವಿ ದುರುಪಯೋಗ ಮಾಡಬಾರದು ಪೋಲೀಸ್ ಇಲಾಖೆ ಯಾವತ್ತೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಇಲಾಖೆ. ಏನೇ ಸಮಸ್ಯೆಗಳು ಬಂದರೂ 112 ಗೆ ಕರೆ ಮಾಡಿ ಎಂದು ಹೇಳಿದರು. ಕಾನೂನು ಎಲ್ಲರಿಗೂ ಒಂದೇ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬ ಅರಿವು ಇರಬೇಕು ಎಂದು ತಿಳಿಸಿದರು. ನಂತರ ಕೋವಿ ತಪಾಸಣೆ ನಡೆಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಚಿತ್ರಕುಮಾರಿ ಪಾಲಡ್ಕ, ಸದಸ್ಯರಾದ ಪ್ರಶಾಂತ್ ಪಾನತ್ತಿಲ, ಭವಾನಿ ಎಂ. ಪಿ., ಮಮತಾ ಕುದ್ಪಾಜೆ, ಸಂದೀಪ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಗಳಾದ ಪಿ. ಎಸ್. ಗಂಗಾಧರ, ಸುರೇಶ ಅಮೈ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶಿವರಾಮ ಎಂ. ಪಿ, ದಿವಾಕರ ಸೆಟ್ಟಿಹಿತ್ಲು ಸೇರಿದಂತೆ 60 ಕ್ಕೂ ಮಿಕ್ಕಿ ಗ್ರಾಮಸ್ಥರು ಭಾಗವಹಿಸಿದ್ದರು. ಎ. ಎಸ್. ಐ ತಾರಾನಾಥ, ಬೀಟ್ ಪೊಲೀಸರಾದ ಜ್ಯೋತಿ, ಚಂದ್ರಶೇಖರ, ಪ್ರಕಾಶ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಸ್ವಾಗತಿಸಿ, ವಂದಿಸಿದರು. ಕೋವಿ ಪರವಾನಿಗೆದಾರರನ್ನು ಒಟ್ಟು ಸೇರಿಸುವಲ್ಲಿ ಪಿ. ಎಸ್. ಗಂಗಾಧರ ಶ್ರಮಿಸಿದ್ದರು.










