ಪ್ರಣಿತ್ ಎಂ.ಬಿ ಮತ್ತು ಪ್ರಾಂಜಲಿರವರ ಮಾಲಕತ್ವದ “ಸೆರೇನೋ ಜಿಲೇಟೊ” ಗೆ ಪ್ರತಿಷ್ಠಿತ ಫುಡ್ ಕಾನಸರ್ಸ್ ಇಂಡಿಯಾ 2025 ರಾಷ್ಟ್ರ ಪ್ರಶಸ್ತಿ

0

ದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಫುಡ್ ಕಾನಸರ್ಸ್ ಇಂಡಿಯಾ 2025 ರ ರಾಷ್ಟ್ರ ಪ್ರಶಸ್ತಿಯು ಸುಳ್ಯ ಮೂಲದ ಪ್ರಣಿತ್ ಎಂ.ಬಿ ಮತ್ತು ಪ್ರಾಂಜಲಿರವರ ಮಾಲಕತ್ವದ ಮಂಗಳೂರಿನ “ಸೆರೇನೋ ಜಿಲೇಟೊ” ರಾಷ್ಟ್ರ ಪ್ರಶಸ್ತಿಗೆ ಪುರಸ್ಕೃತವಾಗಿದೆ.

ಪ್ರಣೀತ್ ಸುಳ್ಯದ ಪ್ರತಿಷ್ಟಿತ ನೆಹರೂ ಮೆಮೊರಿಯಲ್ ಕಾಲೇಜು ಇದರ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ ಬಾಲಚಂದ್ರ ಗೌಡ ಹಾಗೂ ಸುಳ್ಯ ಶಾರದಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಕಮಲಾ ಬಾಲಚಂದ್ರರವರ ಪುತ್ರ.


ಶ್ರೀಮತಿ ಪ್ರಾಂಜಲಿ ಬೆಳ್ಳಾರೆ ಮೀನಾ ಎಂಟರ್ಪ್ರೈಸಸ್ ಮಾಲಕ ಗಣೇಶ್ ಭಟ್ ಹಾಗೂ ಶ್ರೀಮತಿ ಸುಧಾರವರ ಪುತ್ರಿ.