
ರೋಟರಿ ಕ್ಲಬ್ ಸುಳ್ಯ ಪ್ರಾಯೋಜಕತ್ವದ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ (ರಿ.) ಇದರ ಆಡಳಿತಕ್ಕೊಳ ಪಟ್ಟ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಇಲ್ಲಿ “ಆಟಿಡೊಂಜಿ ದಿನ” ಸಂಭ್ರಮಾಚರಣೆ ಕಾರ್ಯಕ್ರಮ ಆಗಸ್ಟ್ ೧ ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷರಾದ ರೋ. ಮೇಜರ್ ಡೋನರ್ ಡಾ. ರಾಮ್ ಮೋಹನ್ ಕೆ. ಎನ್. ವಹಿಸಿ ಸಭಾ ಕಾರ್ಯಕ್ರಮವನ್ನು ತೆಂಗಿನ ಹೊಂಬಾಳೆ ಅರಳಿಸುವುದರ ಮೂಲಕ ಉದ್ಘಾಟಿಸಿದರು.
ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೋ. ಪ್ರಭಾಕರನ್ ನಾಯರ್‌ರವರು ಹಳೆಯ ಕಾಲದ ವಸ್ತುಗಳ ಪ್ರದರ್ಶನವನ್ನು ಮತ್ತು ಆಟಿಯ ವಿಶೇಷ ಖಾದ್ಯಗಳ ಪ್ರದರ್ಶನವನ್ನು ಉದ್ಘಾಟಿಸಿ, ಶುಭ ಹಾರೈಸಿದರು.
















ವೇದಿಕೆಯಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಕೋಶಾಧಿಕಾರಿ ರೋ. ಮಧುಸೂದನ್ ಕೆ ಹಾಗೂ ರೋ. ಶ್ರೀಮತಿ ಲತಾ ಮಧುಸೂದನ್ ರವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರೋಟರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜ್ಯೋತ್ಸ್ನಾ ಕೆ. ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಕೋರಿದರು.

ಹಿರಿಯ ಶಿಕ್ಷಕಿಯರಾದ ಶ್ರೀಮತಿ ರೇವತಿ ಎನ್. ಮತ್ತು ಶ್ರೀಮತಿ ನಳಿನಿ ಡಿ. ಶಾಲಾ ವಿದ್ಯಾರ್ಥಿ ನಾಯಕನಾದ ಸಂಗಮ್ ಕೆ. ಎಸ್. (೬ನೇ) ಮತ್ತು ಉಪನಾಯಕಿಯಾದ ಪ್ರಾಪ್ತಿ ಎ. ಆರ್. (೫ನೇ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಂದ ತುಳುನಾಡ ಸಂಸ್ಕೃತಿಯನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶಾಲಾ ಸಹಶಿಕ್ಷಕಿ ಶ್ರೀಮತಿ ರಶ್ಮಿ ಎಸ್. ಎನ್. ಮತ್ತು ವಿದ್ಯಾರ್ಥಿನಿಯರಾದ ಸ್ವಸ್ತಿ ಪಿ, ಖುಷಿ ಆರ್, ಆರ್ವಿ ರೈ ಪ್ರಾರ್ಥನೆಗೈದು, ಸಹಶಿಕ್ಷಕಿ ಶ್ರೀಮತಿ ಭವ್ಯ ಪಿ. ಸ್ವಾಗತಿಸಿ, ನರ್ಸರಿ ಶಿಕ್ಷಕಿ ಸಂಗೀತ ಕುಮಾರಿ ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿಯರಾದ ಶ್ರೀಮತಿ ಆಶಾ ಮತ್ತು ಶ್ರೀಮತಿ ಅಶ್ವಿನಿ ಎನ್. ರವರು ತುಳು ಭಾಷೆಯಲ್ಲಿಯೇ ನೆರವೇರಿಸಿದರು. ಶಾಲೆಯ ಎಲ್ಲಾ ಸಿಬ್ಬಂದಿಗಳು, ಮಕ್ಕಳ ಹೆತ್ತವರು ಮತ್ತು ವಿದ್ಯಾರ್ಥಿಗಳ ಸಂಪೂರ್ಣ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.



