ದೇವಚಳ್ಳದ ಅಂಚೆ ವಿತರಕ ಪುರುಷೋತ್ತಮ ಪರಮಲೆ ಸೇವಾ ನಿವೃತ್ತಿ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ನಿವಾಸಿ ದೇವಚಳ್ಳದ ಅಂಚೆ ವಿತರಕ ಪುರುಷೋತ್ತಮ ಪರಮಲೆ ಜು.೩೧ ಸೇವಾ ನಿವೃತ್ತಿ ಹೊಂದಿದರು. ೧೯೭೯ ರಲ್ಲಿ ಕರ್ತವ್ಯಕ್ಕೆ ಸೇರಿದ್ದ ಇವರು ಸುಧೀರ್ಘ ೪೬ ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ದಿ. ಮಾಯಿಲಪ್ಪ ಗೌಡ ಮತ್ತು ದಿಟ ಗೋಪಮ್ಮ ದಂಪತಿಗಳ ಪುತ್ರರಾಗಿರುವ ಇವರ ಪತ್ನಿ ವೇದಾವತಿ. ಪುತ್ರ ಅಶ್ವಿತ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪಂಪ್ ಹೌಸ್ ನಲ್ಲಿ ಖಾಸಗಿ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. , ಪುತ್ರಿ ಅಶ್ವಿನಿ ಮಂಗಳೂರಿನಲ್ಲಿ ನರ್ಸಿಂಗ್ ವೃತ್ತಿ ಮಾಡುತ್ತಿದ್ದಾರೆ.