














ಆ. 15 ದೆಹಲಿಯ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲೋಚನಾ ರಂಗತ್ತಮಲೆಯವರು ವಿಡಿವಿಕೆ ಸದಸ್ಯರಾಗಿ, ಕೃಷಿ ಸಖಿಯಾಗಿ ಸದಸ್ಯರಾಗಿ ಭಾಗವಹಿಸಲಿದ್ದಾರೆ. ಇವರು ಅಲೆಟ್ಟಿ ಲಕ್ಷೀ ಸಂಜೀವಿನಿ ಒಕ್ಕೂಟದ ಸದಸ್ಯೆ. ರಾಜ್ಯದಲ್ಲಿ ಇಬ್ಬರಿಗೆ ಮಾತ್ರ ಈ ಅವಕಾಶ ದೊರೆತಿದ್ದು, ಅದರಲ್ಲಿ ಇವರು ಒಬ್ಬರಾಗಿದ್ದಾರೆ. ಈ ಹಿಂದೆ ಬೆಳಗಾವಿ ಬೆಂಗಳೂರು ಸುಬ್ರಮಣ್ಯ ಪಿಲಿಕುಳ ಮಂಗಳೂರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.










