ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಯುವ ಜನತೆಯಲ್ಲಿ ಅರಿವು ಮೂಡಿಸುತ್ತಿರುವ ವಿ.ಅಕಾಡೆಮಿಯಿಂದ ಪಿ ಯು ಸಿ/ಪದವಿ ನಂತರ ಮುಂದೇನು? ಮಾಹಿತಿ ಕಾರ್ಯಾಗಾರ
ನಿಸ್ವಾರ್ಥವಾದ ಪರಿಶ್ರಮ ಉನ್ನತ ಜೀವನಕ್ಕೆ ಭದ್ರ ಬುನಾದಿ ಹಾಕುತ್ತದೆ: ರಂಗನಾಥ್
ವಿ. ಅಕಾಡೆಮಿಯಲ್ಲಿ ನಡೆಯಲಿದೆ ಉಚಿತ ಕೌನ್ಸ್ಲಿಂಗ್
ಸರಕಾರಿ ನೇಮಕಾತಿ ಹಾಗೂ ಖಾಸಗಿ ಉದ್ಯೋಗದಲ್ಲಿ ಯುವ ಜನತೆಯಲ್ಲಿರುವ ಉದ್ಯೋಗ ಕೌಶಲ್ಯತೆಯ ಕೊರತೆಯನ್ನು ನಿವಾರಿಸುವ ಸಲುವಾಗಿ ನಿರಂತರವಾದ ಅರಿವಿನ ಕಾರ್ಯ ಮಾಡಿ ಕಳೆದ ಹಲವಾರು ವರ್ಷಗಳಿಂದ ಸರಕಾರಿ ನೇಮಕಾತಿಗಳಿಗೆ ತರಬೇತಿ ನೀಡಿ ಯಶಸ್ಸಿನ ಹಾದಿಯಲ್ಲಿರುವ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ವಿಶೇಷವಾಗಿ ಪಿಯುಸಿ/ಡಿಗ್ರಿ ಯ ನಂತರ ಮುಂದೇನು ಎಂಬ ಯೋಚನೆಯಲ್ಲಿರುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು















ಕಾರ್ಯಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕೆ.ಎಫ್.ಡಿ.ಸಿ ಯ ನಿವೃತ್ತ ಅಧಿಕಾರಿ ಹಾಗೂ ಯಶಸ್ವೀ ಉದ್ಯಮಿಯಾದ ಶ್ರೀ ರಂಗನಾಥ್ ರವರು “ಸುಳ್ಯದಂತಹ ಭಾಗದಲ್ಲಿ ಖಾಸಗಿ ಮತ್ತು ಸರಕಾರಿ ನೇಮಕಾತಿಗಳ ವಿಚಾರದಲ್ಲಿ ಯುವ ಜನತೆಯಲ್ಲಿ ಆಗಬೇಕಿದ್ದ ಬದಲಾವಣೆಯನ್ನು ವಿ.ಅಕಾಡೆಮಿಯು ಇಂತಹ ಮಾಹಿತಿ ಕಾರ್ಯಗಾರ ಮತ್ತು ತರಬೇತಿಯನ್ನು ಆಯೋಜಿಸುವ ಮೂಲಕ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ನಿರಂತರವಾದ ಪರಿಶ್ರಮ ಮುಖ್ಯ ವಾಗುತ್ತದೆ ಮತ್ತು ಇಂತಹ ಪ್ರಯತ್ನಗಳು ಉನ್ನತ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು” ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಸಂಸ್ಥೆಯ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಂಡರು ನಂತರದಲ್ಲಿ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಯಶಸ್ವಿಯಾದ ಮಾಹಿತಿ ಕಾರ್ಯಾಗಾರ
ಸೂಕ್ತವಾದ ಮಾಹಿತಿಯ ಕೊರತೆಯಿಂದ ಹಲವಾರು ನೇಮಕಾತಿಯನ್ನು ಕಳೆದುಕೊಳ್ಳುವವರಿಗೆ ಈ ಕಾರ್ಯಾಗಾರ ಬಹು ಉಪಯುಕ್ತವಾಗಿತ್ತು, ಎರಡು ಭಾಗವಾಗಿ ನಡೆದ ಕಾರ್ಯಗಾರದಲ್ಲಿ ಮೊದಲಾಗಿ ಭಾಗ್ಯೇಶ್ ರೈರವರು ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಇರುವ ಅವಕಾಶಗಳು ಮತ್ತು ಉದ್ಯೋಗ ಕೌಶಲ್ಯತೆಯನ್ನು ಬೆಳೆಸಿಕೊಳ್ಳುವ ಕುರಿತು ಸೇರಿದಂತೆ ವಿವಿಧ ಆಯಾಮಗಳಲ್ಲಿ ಮಾಹಿತಿ ನೀಡಿದರು,
ಎರಡನೇ ಭಾಗದಲ್ಲಿ ಕಾರ್ಯಗಾರವನ್ನು ವಿದ್ಯಾಮಾತಾ ಅಕಾಡೆಮಿಯ ತರಬೇತುದಾರರಾದ ಚಂದ್ರಕಾಂತ್ ರವರು ನಡೆಸಿಕೊಟ್ಟರು.
ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಂಗನಾಥ್ ರವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ತರಬೇತುದಾರರಾದ ಚಂದ್ರಕಾಂತ್, ಮೇಘನಾ ಕೆ ಎಸ್, ಚರಿಷ್ಮ ಕೆ ಎನ್, ಸಿಬ್ಬಂದಿ ಮಿಥುನ್ ರೈ ಹಾಗೂ ಕಾರ್ಯಾಗಾರದ ಫಲಾನುಭವಿಗಳು ಉಪಸ್ಥಿತರಿದ್ದರು.
ವಿದ್ಯಾಮಾತಾ ಅಕಾಡೆಮಿ ಪ್ರತಿನಿತ್ಯ ನಡೆಯಲಿದೆ ಉಚಿತ ಕೌನ್ಸ್ಲಿಂಗ್
ಉದ್ಯೋಗಾದಾರಿತವಾಗಿ ಮಾಹಿತಿಗಳ ಕೊರತೆಯಿಂದ ಅವಕಾಶ ಕಳೆದುಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಕೌನ್ಸ್ಲಿಂಗ್ ನಡೆಯಲಿದೆ. ಆಸಕ್ತರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಲು ಪ್ರಕಟಣೆ ತಿಳಿಸಿದೆ.
ವಿದ್ಯಾಮಾತಾ ಅಕಾಡೆಮಿ*
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869
ಸುಳ್ಯ ಶಾಖೆ: ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
PH: 9448527606










