ಆನೆ ಸೆರೆಹಿಡಿಯಲು ಮನವಿ
ಮೈಸೂರು – ಕೊಡಗು ಲೋಕಸಭಾ ಸದ್ಯಸ್ಯರಾದ ಯದುವೀರ್ ಒಡೆಯರ್ ರವರನ್ನು ಭೇಟಿ ಮಾಡಿ ಚೆಂಬು ಗ್ರಾಮದಲ್ಲಿ ಕಾಡಾನೆ ಹಾವಳಿ ಬಗ್ಗೆ ವಿವರಿಸಿ ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.















ಈ ಸಂದರ್ಭದಲ್ಲಿ ಚೆಂಬು ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುಬ್ರಮಣ್ಯ ಉಪಾಧ್ಯಯ ಪಂಚಾಯತ್ ಅಧ್ಯಕ್ಷರಾದ . ತೀರ್ಥರಾಮ ಪೂಜಾರಿಗದ್ದೆ . ರಮೇಶ್ ಹುಲ್ಲುಬೆಂಕಿ ಪಯಶ್ವಿನಿ ಬ್ಯಾಂಕಿನ ನಿರ್ದೇಶಕರಾದ ಪುಂಡರೀಕ ಅರಂಬೂರು ಹಾಗೂ ಶ್ರೀಕಾಂತ್, ಮನೋಜ್, ಸಚಿನ್, ಹರ್ಷ, ಭವಾನಿಶಂಕರ್, ಶಿವರಾಮ್, ಭೋಜಪ್ಪ, ಉಮೇಶ್ ಎನ್, ಮಹೇಶ್ ಭಟ್, ಶ್ರೀಧರ್ ಭಟ್, ಉಮೇಶ್ ಕುತ್ಯಾಳ ಮೊದಲಾದವರು ಉಪಸ್ಥಿತರಿದ್ದರು.
ಕೂಡಲೇ ಸ್ಪಂದಿಸಿದ ಸಂಸದರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.










