ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ‘ಅರಭಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಮಾಸಿಕ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಂದ ದೇರಾಜೆ ಮನೆತನದ ಐನ್ ಮನೆಗೆ ಆ. 2ರಂದು ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.
















ವಿದ್ಯಾರ್ಥಿಗಳು ಸಂಸ್ಥೆಯ ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ, ಶಿಕ್ಷಕಿ ಶ್ರೀಮತಿ ಮಮತಾ ಏನ್. ರವರೊಂದಿಗೆ ಗದ್ದೆ ಬೇಸಾಯ ಮತ್ತು ನಿರ್ವಹಣೆಯ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಪಡೆದುಕೊಂಡರು. ಕುಟುಂಬದ ಹಿರಿಯರಲ್ಲೊಬ್ಬರಾದ ಹೂವಯ್ಯ ಗೌಡರು ವಿದ್ಯಾರ್ಥಿಗಳ ಕುತೂಹಲದ ಪ್ರಶ್ನೆ ಗಳಿಗೆ ವಿವರಣಾತ್ಮಕ ಉತ್ತರಗಳನ್ನು ನೀಡಿದರು. ಡಿಎಸ್ ಭಾಸ್ಕರ ಗೌಡ, ಡಿ.ಎಸ್ ಪುರುಷೋತ್ತಮ್ ಗೌಡ, ನವೀನಕುಮಾರ್, ಪುಂಡರಿಕ ಮೊದಲಾದ ಕುಟುಂಬ ಸದಸ್ಯರೊಂದಿಗೆ ಕಣ್ಮರೆಯಾಗುತ್ತಿರುವ ಅರೆಭಾಸೆ ಸಂಸ್ಕೃತಿಯ ಕುರಿತು ವಿದ್ಯಾರ್ಥಿಗಳು ಸಂವಾದ ನಡೆಸಿದರು. ಅರೆಬಾಷಿಕರ ಆಚಾರ- ವಿಚಾರ, ದೈವಾರಾಧನೆ, ಆಗಿಹೋದ ಕುಟುಂಬದ ಹಿರಿಯರ ಸಾಧನೆಗಳು, ಅಮರ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸುವಿಕೆ ಮೊದಲಾದ ಅಪೂರ್ವ ಮಾಹಿತಿಗಳನ್ನು ಪಡೆದುಕೊಂಡರು. ಸಂಘದ ಅಧ್ಯಕ್ಷೆ ಕು.ಗ್ರೀಷ್ಮ ವಂದಿಸಿದರು.










