ಸುಳ್ಯ ಗೌಡರ ಯುವ ಸೇವಾ ಸಂಘ(ರಿ) ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ 13ನೇ ವರ್ಷದ ಆಟಿ ಆಚರಣೆಯ ಸಂಭ್ರಮವುಆ. 3 ರಂದು ಸುಳ್ಯದ ಕೋಡಿಯಾಲ ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯವಾದಿಗಳು , ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೊಡಿಯಾಲ ಬೈಲು ಆಡಳಿತ ಸಮಿತಿ ಅಧ್ಯಕ್ಷರು ರಾಮಕೃಷ್ಣ ಅಮೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷತೆ ವಹಿಸಿದ ಪಿ.ಎಸ್ ಗಂಗಾಧರ ಪ್ರಾಸಾವಿಕ ಮಾತುಗಳನ್ನಾಡಿದರು.















ಈ ಸಂದರ್ಭದಲ್ಲಿ ಸುಳ್ಯ ನಗರ ಗೌಡ ಸಮಿತಿಯ ಅಧ್ಯಕ್ಷ ರಾಕೇಶ್ ಕುಂಟಿಕಾನ , ಗೌಡರ ಯುವ ಸೇವಾ ಸಂಘ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕ ಬಳೆ ,ತಾಲೂಕು ತರುಣ ಘಟಕ ಅಧ್ಯಕ್ಷ ಪ್ರೀತಮ್ ಡಿ.ಕೆ , ತಾಲೂಕು ಮಹಿಳಾ ಘಟಕದ ಅಧ್ಯಕ್ಷರು ವಿನೂತ ಪಾತಿಕಲ್ಲು, , ಮಹಿಳಾ ನಗರ ಘಟಕ ಕಾರ್ಯದರ್ಶಿ ಸುಜಾತ ಕಿರಣ ಕುರುಂಜಿ , ಸಮಿತಿಯ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ನಗರ ಘಟಕ ಅಧ್ಯಕ್ಷರಾದ ಶ್ರೀಮತಿ ಹರ್ಷಾ ಕರುಣಾಕರ ಸರ್ವರನ್ನು ಸ್ವಾಗತಿಸಿ, ನಗರ ಗೌಡರ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಕುಂತಿನಡ್ಕ ಧನ್ಯವಾದಿಸಿ ,ಶ್ರೀಮತಿ ಲತಾಶ್ರೀ ಸುಪ್ರೀತ್ ಮೋಟoಡ್ಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪುರುಷರಿಗೆ , ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳು , ಹಾಗೂ ಮಧ್ಯಾಹ್ನ ಬಳಿಕ ಸಮಾರೋಪ ಸನ್ಮಾನ ಕಾರ್ಯಕ್ರಮ ನಡೆಯಲಿದೆ.










