ನಾಗರಿಕ ಹಿತರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ, ಕಾರ್ಯದರ್ಶಿಯಾಗಿ ರಂಜಿತ್ ಅಡ್ತಲೆ ಪುನರಾಯ್ಕೆ

ನಾಗರಿಕ ಹಿತರಕ್ಷಣಾ ವೇದಿಕೆಯ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಆ. 3 ರಂದು ನಡೆಯಿತು.

ಕಾರ್ಯದರ್ಶಿ ರಂಜಿತ್ ಅಡ್ತಲೆ ಸರ್ವರನ್ನು ಸ್ವಾಗತಿಸಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಮಂಡಿಸಿದರು.


ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹರಿಪ್ರಸಾದ್ ಅಡ್ತಲೆ, ಉಪಾಧ್ಯಕ್ಷರಾಗಿ ವಿನಯ್ ಬೆದ್ರುಪಣೆ, ಲೋಹಿತ್ ಮೇಲಡ್ತಲೆ,ಸ್ವಾತಿಕ್ ಕಿರ್ಲಾಯ, ಜೊತೆ ಕಾರ್ಯದರ್ಶಿಯಾಗಿ ಮೋಹನ ಕಿನಾಲ , ಖಜಾಂಜಿಯಾಗಿ ಶಶಿಕುಮಾರ್ ಉಳುವಾರು ಆಯ್ಕೆಗೊಂಡರು.

ನೂತನ ನಿರ್ದೆಶಕರಾಗಿ ದುರ್ಗಾಪ್ರಸಾದ್ ಮೇಲಡ್ತಲೆ,ತೇಜಕುಮಾರ್ ಅರಮನೆಗಯ, ರತನ್ ಕಿರ್ಲಾಯ, ದೊಡ್ಡಯ್ಯ ಪಿಂಡಿಮನೆಯವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಓಂ ಪ್ರಸಾದ್ ಪಿಂಡಿಮನೆ,ಕೇಶವ ಮೇಲಡ್ತಲೆ, ದಯಾನಂದ ಬೆದ್ರುಪಣೆ,ಮೋಹನ ಪಂಜದಬೈಲು,ಸಚಿನ್ ಪಿಂಡಿಮನೆ, ಗಿರೀಶ್ ಅಡ್ಕ, ರಕ್ಷಿತ್ ಚೀಮಾಡು, ಪುರುಷೋತ್ತಮ ಬೆದ್ರುಪಣೆ,ಅಶೋಕ ಬೆದ್ರುಪಣೆ,ಹರೀಶ್ ಎ.ಕೆ ಅಡ್ತಲೆ, ಸಂತೋಷ್ ಪಿಂಡಿಮನೆ,ಸುನಿಲ್ ಅಡ್ತಲೆ,ಮನೋಜ್ ಅಡ್ತಲೆ, ಕಿಶೋರ್ ಅಡ್ಕ , ಮಹಿಳಾ ಸದಸ್ಯರಾಗಿ ಸೌಮ್ಯ ಮೇಲಡ್ತಲೆ,ಲತಾ ಮೇಲಡ್ತಲೆ,ರೇಖಾ ಬೆದ್ರುಪಣೆ,ಸುಶ್ಮಿತಾ ಬೆದ್ರುಪಣೆ,ಜಯಲತಾ ಅಡ್ತಲೆ,ಶ್ಯಾಮಲಾ ಅಡ್ತಲೆ,ಹರ್ಷಿತಾ ಬೆದ್ರುಪಣೆ,ಕವಿತಾ ಅಡ್ತಲೆ,ಬೇಬಿ ಕಲ್ಲುಗದ್ದೆ ಆಯ್ಕೆಗೊಂಡರು.


ಗೌರವ ಸಲಹೆಗಾರರಾಗಿ ಭವಾನಿ ಶಂಕರ ಅಡ್ತಲೆ, ಹರೀಶ್ಚಂದ್ರ ಮೇಲಡ್ತಲೆ, ಗೋಪಾಲಕೃಷ್ಣ ಪಿಂಡಿಮನೆ,ಶ್ರೀಧರ ನಾರ್ಕೋಡು,ಗಣೇಶ್ ಮಾಸ್ತರ್ ಅಡ್ತಲೆ, ಚಿದಾನಂದ ಮಾಸ್ತರ್ ಅಡ್ತಲೆ ಆಯ್ಕೆ ಮಾಡಲಾಯಿತು.
ವೇದಿಕೆಯನ್ನು ನೋಂದಾವಣಿ ಮಾಡುವುದೆಂದು ನಿರ್ಣಯಿಸಲಾಯಿತು.ಪಿಂಡಿಮನೆಯಿಂದ ಬಾಕಿಯಾಗಿರುವ ರಸ್ತೆಯ ಅಗಲೀಕರಣಕ್ಕೆ ಸಂಬಂಧಿಸಿದ ಇಲಾಖೆಗಳಿಗೆ , ಜನಪ್ರತಿನಿಧಿಗಳಿಗೆ ಮನವಿ ನೀಡುವುದರ ಜೊತೆಗೆ ಕಾಮಗಾರಿಯನ್ನು ಪಿಂಡಿಮನೆಯಿಂದಲೇ ಆರಂಭಿಸುವಂತೆ ಒತ್ತಡ ಹೇರುವುದು,ಅರಮನೆಯ ಸೇತುವೆ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಯಿತು.