"ಆಟಿ ಎನ್ನುವುದು ಒಂದು ಜೀವನ ಪದ್ಧತಿ. ಈ ತಿಂಗಳ ಕುರಿತಂತೆ ನಮ್ಮ ಹಿರಿಯರು ಹೊಂದಿರುವ ಅಭಿಪ್ರಾಯಗಳು ಅವರು ಲೋಕ ದೃಷ್ಟಿಯ ಪ್ರತೀಕಗಳು. ಇಂದು ನಾವು ಆಟಿಯನ್ನು ಬದುಕುವುದಿಲ್ಲ ಆಚರಿಸುತ್ತಿದ್ದೇವೆ. ಹಿರಿಯರು ಕಟ್ಟಿದ ಈ ಸಂಸ್ಕೃತಿಯ ಬೇರುಗಳನ್ನು ನಾವು ಆಟಿ ಆಚರಿಸುವ ಮೂಲಕ ಹೊಸ ತಲೆಮಾರಿಗೆ ಆ ಸ್ಮೃತಿಯನ್ನು ರವಾನಿಸುವ ಕಾರ್ಯವನ್ನು ಮಾಡುವುದಾಗಿದೆ" ಎಂದು ವಿಶ್ರಾಂತ ಪ್ರಾಂಶುಪಾಲರು ಮತ್ತು ಜಾನಪದ ಸಂಶೋಧಕರಾದ ಡಾ. ಪೂವಪ್ಪ ಕಣಿಯೂರು ಹೇಳಿದರು. ಅವರು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ಆ. 2ರಂದು ನಡೆದ ಆಟಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷ ಪುರುಷೋತ್ತಮ ಸುಳ್ಳಿ ವಹಿಸಿದ್ದರು.
















ಅತಿಥಿಗಳಾಗಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು , ಎಸ್ ಡಿ ಎಂ ಸಿ ನಿಕಟಪೂರ್ವ ಅಧ್ಯಕ್ಷ ಧನಂಜಯ ಬಾಳೆ ತೋಟ, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ, ವಿದ್ಯಾರ್ಥಿ ನಾಯಕಿ ಮಾನ್ಯ ಕೆ ಡಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು , ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಶಿಕ್ಷಕರಾದ ವಸಂತ್ ನಾಯಕ್ ಧನ್ಯವಾದ ಅರ್ಪಿಸಿದರು. ಮುರಳೀಧರ ಪುನುಕುಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ದಿನ ಆಟಿ ಉತ್ಸವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಚೆನ್ನೆಮಣೆ ಸ್ಪರ್ಧೆ ಆಯೋಜಿಸಲಾಗಿತ್ತು ಹಾಗೂ ನೇಸರ, ಇಂಪನ, ಐಸಿರಿ ಮತ್ತು ಇಬ್ಬನಿ ವಿದ್ಯಾರ್ಥಿ ತಂಡಗಳಿಂದ ಆಟಿ ತಿಂಗಳ ವಿಶೇಷ ಖಾದ್ಯ ಮತ್ತು ಔಷಧಿ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಯಿತು.










