ಸುಳ್ಯ ತಾಲೂಕು ಮೊಗೇರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಸುಳ್ಯ ತಾಲೂಕು ಮೊಗೇರ ಸಂಘದ ವತಿಯಿಂದ ವತಿಯಿಂದ 2024 -25 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತ್ತಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಎಸ್.ಅಂಗಾರರವರು ಡಾ| ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರಾದ ನಂದರಾಜ್ ಸಂಕೇಶ , ಸುಳ್ಯ ತಾಲೂಕು ಸಂಘದ ಗೌರವಾಧ್ಯಕ್ಷರಾದ ಕೇಶವ ಮಾಸ್ಟರ್ ಹೊಸಗದ್ದೆ , ಶಂಕರ್ ಪೆರಾಜೆ, ಸಂಘಟನಾ ಕಾರ್ಯಧರ್ಶಿ ಅಚ್ಚುತ್ತ ಮೆಲ್ಕಜೆ , ಪ್ರಧಾನ ಕಾರ್ಯದರ್ಶಿಯಾದ ಬಾಳಪ್ಪ ಮಣಿಮಜಲು , ನಿವೃತ್ತ ಶಿಕ್ಷಕರಾದ ರಘುನಾಥ ಕಾಯರ, ಸದಸ್ಯರಾದ ಬಾಬು ಕನಕಮಜಲು , ಮಧುಸೂದನ್ ಬೂಡು , ವಸಂತ ಚತ್ರಪ್ಪಾಡಿ ಉಪಸ್ಥಿತರಿದ್ದರು.


ಬಾಳಪ್ಪ ಮಣಿಮಜಲು ಸ್ವಾಗತಿಸಿ, ಗೌರವಾಧ್ಯಕ್ಷರಾದ ಶಂಕರ್ ಪೆರಾಜೆ ವಂದಿಸಿದರು. ಮತ್ತು ಪ್ರಕಾಶ್ ಪಿ.ಎಸ್. ಪಾತೆಟ್ಟಿ ಕಾರ್ಯಕ್ರಮ ನಿರೂಪಿಸಿದರು.