ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಅಂಚೆ ಇಲಾಖೆಯ ಸಹಕಾರದಿಂದ ಆಗಷ್ಟ್ 2 ಮತ್ತು 3 ರಂದು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವನ್ನು ಸಂಘದ ಚೆಂಬು ಶಾಖೆಯಲ್ಲಿ ಆಯೋಜಿಸಲಾಗಿತ್ತು.
















ಹಿರಿಯ ಸಹಕಾರಿಗಳಾದ ಸುಬ್ರಹ್ಮಣ್ಯ ಉಪಾಧ್ಯಾಯರು ಜ್ಯೋತಿ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ಮಾಡಿದರು.ಸಂಘದ ಅದ್ಯಕ್ಷರಾದ ಅನಂತ್ ಊರುಬೈಲು ರವರು ಮಾತನಾಡಿ,ದೇಶದ ಪ್ರತಿಯೊಬ್ಬನಿಗೂ ಅವನ ಪ್ರತಿ ವ್ಯವಹಾರಕ್ಕೂ ಆಧಾರ್ ಕಾರ್ಡ್ ಅನಿವಾರ್ಯವಾಗಿದ್ದು,ಇದರ ನೋಂದಣಿ ಮತ್ತು ತಿದ್ದುಪಡಿಗೆ ಪೂರಕವಾದ ಸರ್ವರ್ ವ್ಯವಸ್ಥೆ ಮತ್ತು ತಂತ್ರಾಂಶವನ್ನು ಸಂಬಂದಪಟ್ಟವರು ಕಾಲಕಾಲಕ್ಕೆ ಅಪ್ ಡೇಟ್ ಮಾಡಬೇಕೆಂದು ಆಗ್ರಹಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷ ತೀರ್ಥರಾಮ ಪೂಜಾರಿ,ಶ್ರೀ ಭಗವಾನ್ ಸಂಘದ ಅದ್ಯಕ್ಷ ಪ್ರಶಾಂತ್ ಊರುಬೈಲು, ಸಂಸ್ಥೆಯ ಸಿಇಒ ಬಿ.ಕೆ ಆನಂದ,ನೋಂದಣಾದಿಕಾರಿ ಕೃಪೇಶ್ ಉಪಸ್ಥಿತರಿದ್ದರು.
ಶಿಬಿರದ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ಶ್ರೀ ಭಗವಾನ್ ಸಂಘದ ಸದಸ್ಯರು ನಿರ್ವಹಿಸಿದರು.ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ನಿಂದ ಒದಗಿಸಲಾಗಿತ್ತು.










