ಅಜ್ಜಾವರ :ಶಾಲಾ ಪರಿಸರದ ಅಂಗಡಿಗಳಿಗೆ ಸುಳ್ಯ ಪೊಲೀಸರಿಂದ ದಾಳಿ

0

ತಂಬಾಕು ಪದಾರ್ಥಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ ಅಧಿಕಾರಿಗಳು

ಅಜ್ಜಾವರ ಶಾಲಾ ಪರಿಸರದಲ್ಲಿರುವ ಅಂಗಡಿಗಳಿಗೆ ಸುಳ್ಯ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಂಬಾಕು ಉತ್ಪನ್ನ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಆ. ೪ ರಂದು ವರದಿಯಾಗಿದೆ.

ಅಜ್ಜಾವರ ಗ್ರಾಮದ ಅಡ್ಪಂಗಾಯ ಜಂಕ್ಷನ್ ಬಳಿ ಇರುವ ಅಂಗಡಿಗಳಿಗೆ ದಾಳಿ ಮಾಡಿದ ಅಧಿಕಾರಿಗಳು ತಂಬಾಕು ಉತ್ಪನ್ನ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಚರಣೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಸಂತೋಷ ಹಾಗೂ ಸಿಬ್ಬಂದಿಗಳು,
ಸುಳ್ಯ ತಾಲೂಕಿನ ಅರೋಗ್ಯ ಇಲಾಖೆಯ ಅರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಪ್ಪ ಜಿ ಎಚ್ ಮತ್ತು ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಲೋಕೇಶ್ ರವರುಗಳೊಂದಿಗೆ ಜಂಟಿ ಕಾರ್ಯಚಾರಣೆ ನಡೆಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರ ಮೇಲೆ ದಂಡ ವಿಧಿಸಿ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ ಎಂದು ತಿಳಿದುಬಂದಿದೆ.