ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ ಅ. 1-2ರಂದು ನಡೆಯಲಿರುವ ಶ್ರೀ ಶಾರದೋತ್ಸವ ಬಗ್ಗೆ ಪೂರ್ವಭಾವಿ ಸಭೆ ಆ. 3ರಂದು ಸಮಿತಿಯ ಅಧ್ಯಕ್ಷ ಶೇಷಪ್ಪ ಪರವರ ಅಧ್ಯಕ್ಷತೆಯಲ್ಲಿ ಮುಪ್ಪೇರ್ಯದ ಶ್ರೀ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ 2024ರ ಶಾರದೋತ್ಸವದ ಲೆಕ್ಕಪತ್ರ ಮಂಡಿಸಿದರು.
ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ
ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಮರೆಂಗಾಲ, ಕಾರ್ಯದರ್ಶಿಯಾಗಿ ದಿನೇಶ್ ರೈ ದೇರಂಪಾಲು,
ಉಪಾಧ್ಯಕ್ಷರಾಗಿ ದಿವಾಕರ ರೈ ಬೊಮ್ಮಣಮಜಲು,
ಖಚಾಂಜಿಯಾಗಿ ರಾಜೇಶ್ ಗೌಡ,
ಜೊತೆ ಕಾರ್ಯದರ್ಶಿಯಾಗಿ ಶೀನಪ್ಪ ಹೊನ್ನಡ್ಕ ಆಯ್ಕೆಯಾದರು.















ಮಹಿಳಾ ಸಮಿತಿ ಅಧ್ಯಕ್ಷರಾಗಿ ಜಾಹ್ನವಿ ಕಾಂಚೋಡು,
ಉಪಾಧ್ಯಕ್ಷರಾಗಿ ಪ್ರೇಮಲತಾ ಮರುವಂಜ, ಕಾರ್ಯದರ್ಶಿಯಾಗಿ ಹರಿಣಾಕ್ಷಿ ಬರಮೇಲು,
ಬಜಾಂಜಿಯಾಗಿ ಸುಮಿತ್ರ ಚಂದ್ರಹಾಸ ಬಾಳಿಲ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಎ.ಎಂ. ಸುಧಾಕರ ರೈ, ಗೌರವ ಸಲಹೆಗಾರರಾದ ಎ.ಕೆ. ನಾಯ್ಕ್ ಚೊಕ್ಕಾಡಿ, ಅಶೋಕ್ ಶೆಟ್ಟಿ ಅರ್ಚನಾ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕಮಲ ಸ್ವಾಗತಿಸಿ, ಸಮಿತಿ ನೂತನ ಅಧ್ಯಕ್ಷ ಬಾಲಕೃಷ್ಣ ಮರೆಂಗಲ ವಂದಿಸಿದರು.










