ರಚನ್ ಪಾಡಾಜೆ ಐಐಎಂ ಎಂಬಿಎ ಪ್ರವೇಶಕ್ಕೆ ಆಯ್ಕೆ

0

ದೇಶದ ಪ್ರತಿಷ್ಠಿತ ನಿರ್ವಹಣಾ ಅಧ್ಯಯನ ಕೇಂದ್ರವಾದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ ಅಮರಪಡ್ನೂರು ಗ್ರಾಮದ ಪಾಡಾಜೆಯ ರಚನ್ ಕಲ್ಕತ್ತಾ ಐಐಎಂ ಸಂಸ್ಥೆಯಲ್ಲಿ ಎಂಬಿಎ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.


ಐಐಎಂ ಸಂಸ್ಥೆಯು ಎಂಬಿಎ ಅಧ್ಯಯನಕ್ಕೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.

ಟಾಪ್ 3 ಸಂಸ್ಥೆಯಲ್ಲಿ ಆಯ್ಕೆಯಾಗಿರುವ ರಚನ್ ಪಾಡಾಜೆ ಗೋಪಾಲಕೃಷ್ಣ ಮತ್ತು ಸುಶೀಲಾ ದಂಪತಿಗಳ ಪುತ್ರ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಮರಪಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಚೊಕ್ಕಾಡಿ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ, ವಾಣಿಜ್ಯ ಪದವಿ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪೂರೈಸಿರುತ್ತಾರೆ.

ವರದಿ : ಉಮೇಶ್ ಮಣಿಕ್ಕಾರ