ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕುದ್ಕುಳಿ ಉಳಿಯ ಸಂಪರ್ಕದ ವಿವಾದಿತ ರಸ್ತೆ ಕುರಿತು ಸಮಾಲೋಚನಾ ಸಭೆ

0

ರಸ್ತೆ ಯಥಾ ಸ್ಥಿತಿ ಕಾಪಾಡುವಂತೆ ಹಾಗೂ ನ್ಯಾಯಾಲಯದಲ್ಲಿರುವ ದಾವೆಹಿಂತೆಗೆದುಕೊಳ್ಳುವಂತೆ
ನಿರ್ಧಾರ

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಕುದ್ಕುಳಿ ಎಂಬಲ್ಲಿ ರಸ್ತೆ ಸಮಸ್ಯೆಯ ಕುರಿತು ಉದ್ಭವಿಸಿದ್ದ ವ್ಯಾಜ್ಯ ಪಂಚಾಯತ್ ನಲ್ಲಿ ಪಂ. ಅಧ್ಯಕ್ಷರು ಮತ್ತು ಸದಸ್ಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ರಾಜಿ ಪಂಚಾಯತಿಕೆಯಲ್ಲಿ
ಅ.6 ರಂದು ಇತ್ಯರ್ಥಪಡಿಸಲಾಯಿತು.

ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ಅಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಿತ್ತಡ್ಕ ರೋಟರಿ ಶಾಲೆಯ ಬಳಿಯಿಂದ ಕುದ್ಕುಳಿ ಉಳಿಯ ಕಡೆಗೆ ಹೋಗುವ ಪಂಚಾಯತ್ ಸಂಬಂಧಿಸಿದ ರಸ್ತೆ ವ್ಯಾಜ್ಯ ಕಳೆದೆರಡು ವರ್ಷಗಳಿಂದ ನಡೆಯುತ್ತಿತ್ತು ಪ್ರಕರಣ ಕೇಸು ಕೋರ್ಟ್ ಮೆಟ್ಟಿಲೇರಿದ್ದು ಪಂಚಾಯತಿಕೆಯಲ್ಲಿ ಇತ್ಯರ್ಥವಾಯಿತು.
ಸದ್ರಿ ರಸ್ತೆಯನ್ನು ಯಥಾ ಸ್ಥಿತಿ ಕಾಪಾಡಿಕೊಂಡು ಅಭಿವೃದ್ಧಿ ಪಡಿಸುವ ಬಗ್ಗೆ ಪಂಚಾಯತ್ ಸದಸ್ಯರ ಹಾಗೂ ಕುದ್ಕುಳಿ, ಉಳಿಯ ಪರಿಸರದ ನಿವಾಸಿಗಳ ಸಮಕ್ಷಮದಲ್ಲಿ ಇತ್ಯರ್ಥ ಪಡಿಸಲಾಯಿತು.
ಈ ರಸ್ತೆಯ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ರಸ್ತೆಯ ಮೂಲಕ ಪಯಸ್ವಿನಿ ನದಿಗೆ ಸಂಪರ್ಕ ಕಲ್ಪಿಸುವುದಲ್ಲದೆ ರಾಧಾಕೃಷ್ಣ ಕೊಲ್ಚಾರ್ ರವರ ಮನೆಗೆ ಹೋಗುವ ಏಕೈಕ ರಸ್ತೆ ಇದಾಗಿದ್ದು ಸ್ಥಳೀಯ ನಿವಾಸಿಗಳು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ್ದರು.
ಈ ಬಗ್ಗೆ ಕೇಸು ದಾಖಲಾಗಿದ್ದು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.
ಈ ಬಗ್ಗೆ ಕೋರ್ಟ್ ನಲ್ಲಿ ಹೂಡಲಾಗಿದ್ದ ಕೇಸು ಹಿಂತೆಗೆಯುವ ಬಗ್ಗೆ ಇತ್ತಂಡಗಳ ಒಪ್ಪಿಗೆ
ಮೇರೆಗೆ ತೀರ್ಮಾನ ತೆಗೆದುಕೊಳ್ಳಲಾಯಿತು.
ರಸ್ತೆ ಬದಿಗೆ ಕೃಷಿಗೆ
ಹಾನಿಯಾಗದಂತೆ ಬೇಲಿ ಹಾಕಿ ಕೊಡುವ ಬಗ್ಗೆ ಪಂಚಾಯತ್ ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯತ್
ನ್ಯಾಯ ಸಮಿತಿ ಅಧ್ಯಕ್ಷ ಶಿವಾನಂದ ರಂಗತ್ತಮಲೆ, ಪಂಚಾಯತ್ ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ದಲಿತ ಮಹಿಳಾ ವೇದಿಕೆ ಸಂಚಾಲಕಿ ಸರಸ್ವತಿ ಬೊಳಿಯಮಜಲು
ಪಂಚಾಯತ್ ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು, ಸತ್ಯಕುಮಾರ್ ಆಡಿಂಜ, ಗೀತಾ ಕೋಲ್ಚಾರು,
ಮೀನಾಕ್ಷಿ ಕುಡೆಕಲ್ಲು ಹಾಗೂ ಕುದ್ಕುಳಿ ಪರಿಸರದ ನಿವಾಸಿಗಳಾದ ರಾಧಾಕೃಷ್ಣ ಕೋಲ್ಚಾರು,ಲೀಲಾವತಿ ಕೆ. ಆರ್, ತಂಗವೇಲು ನಾಗಪಟ್ಟಣ,ಲಕ್ಷ್ಮಣ ಗೌಡ ಉಳಿಯ, ಸುಂದರ ಮಿತ್ತಡ್ಕ, ಸುಕುಮಾರ, ಪುಷ್ಪರಾಣಿ, ಚನಿಯ ಕುದ್ಕುಳಿ, ಕೃಷ್ಣಪ್ಪ ಕುದ್ಕುಳಿ, ಲೀಲಾ, ವಿಮಲ, ರತ್ನಾ, ಪಿ. ಡಿ. ಒ ಸೃಜನ್ ಎ. ಜಿ ಯವರ ಸಮ್ಮುಖದಲ್ಲಿ ವಿವಾದಿತ ಪ್ರಕರಣ ಇತ್ಯರ್ಥ ಗೊಂಡಿತು. ಪಂಚಾಯತ್ ಸಿಬ್ಬಂದಿಯವರು ಸಹಕರಿಸಿದರು.