ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಗಮನ ಕೊಡಿ ಪ್ರೋತ್ಸಾಹ ಸಮಾಜ ನೀಡುತ್ತದೆ : ಸಂಕೇಶ್
ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ
ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ ಭಾಷಾ ವಿಷಯ ಕೈಪಿಡಿ ಪುಸ್ತಕದ ವಿತರಣಾ ಕಾರ್ಯಕ್ರಮಕ್ಕೆ ಅ 7 ರಂದು ಚಾಲನೆ ನೀಡಲಾಯಿತು.
ಉದ್ಯಮಿಗಳು ಹಾಗೂ ದಾನಿಯೂ ಆಗಿರುವ ಅಬ್ದುಲ್ ರಹಿಮಾನ್ ಸಂಕೇಶ್ ರವರು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
















ಅವರು ತಮ್ಮ ಸಂಕೇಶ್ ಫೌಂಡೇಶನ್ ವತಿಯಿಂದ 25 ಸಾವಿರ ರೂಗಳನ್ನು ಪುಸ್ತಕ ವಿತರಣೆಗಾಗಿ ದಾನವಾಗಿ ನೀಡಿದ್ದು ಆ ಮೊತ್ತವನ್ನು ಎಸ್ ಡಿ ಎಂ ಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಶಿಕ್ಷಣ ಅತಿ ಮುಖ್ಯ.ಉತ್ತಮ ಶಿಕ್ಷಣ ವಿದ್ದಲ್ಲಿ ಉತ್ತಮ ಬದುಕು ಮತ್ತು ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡಿ.ನಿಮಗೆ ಪ್ರೋತ್ಸಾಹ ನೀಡಲು ಸಮಾಜದಲ್ಲಿ ಅನೇಕ ಮಂದಿ ದಾನಿಗಳು ಇದ್ದಾರೆ.ಮುಂದೆಯೂ ನಮ್ಮಿಂದ ಆಗುವ ಸಹಾಯ ಸಹಕಾರ ನೀಡಲು ನಾವು ಗಳು ಬದ್ದರಿದ್ದೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುಳಾ ಬಡಿಗೇರ್, ಉಪಾಧ್ಯಕ್ಷರಾದ ಹಸೈನಾರ್ ಜಯನಗರ,ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ,ಹಿರಿಯ ಶಿಕ್ಷಕರಾದ ಡಾl ಸುಂದರ ಕೇನಾಜೆ,ಹಾಗೂ ಶಿಕ್ಷಕ ವೃಂದ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










