ಬೆಳ್ಳಾರೆ :ಲಕ್ಷ್ಮೀ ಸಂಜೀವಿನಿ ಒಕ್ಕೂಟದ ವತಿಯಿಂದ ಆಟಿಕೂಟ

0

ಒಕ್ಕೂಟದ ಸದಸ್ಯೆಯರಿಂದ 35 ಬಗೆಯ ವೈವಿಧ್ಯಮಯ ಆಟಿ ಖಾದ್ಯಗಳು

ಬೆಳ್ಳಾರೆ ಲಕ್ಷ್ಮಿ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ಆಶ್ರಯದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶಶಿಕಲಾ ಚಾವಡಿಬಾಗಿಲು ಅವರ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ರಾಜೀವಗಾಂಧಿ ಸೇವಾಕೇಂದ್ರದಲ್ಲಿ ಆಟಿ ಕೂಟ ಮತ್ತು ಮಾಹಿತಿ ಕಾರ್ಯಕ್ರಮ ಆ.5 ರಂದು ನಡೆಯಿತು.


ಲೋಲಾಕ್ಷಿ ಅವರ ಪ್ರಾರ್ಥಿಸಿದರು. ಪಂಚಾಯತ್ ಅಧ್ಯಕ್ಷರಾದ ನಮಿತಾ ಎಲ್ ರೈ ಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಪ್ರಾಸ್ತಾವಿಕ ಮಾತನಾಡಿದ ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕರಾದ ಮಹೇಶ್ ರವರು ಪಾಡ್ದನ ಹಾಡಿನ ಮೂಲಕ ಸಂಜೀವಿನಿ ಒಕ್ಕೂಟದಿಂದ ಆಟಿ ಕೂಟ ಆಯೋಜನೆ ಮಾಡುವ ಮಹತ್ವ ದ ಬಗ್ಗೆ ವಿವರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ವಿಶೇಷ ಮಾಹಿತಿದಾರರಾಗಿ ಡಾ|| ಸುಪ್ರಿಯಾ ಪಿ. ಆರ್ ರವರು ( ಉಪನ್ಯಾಸಕರು, ಶಿವರಾಮಕರಂತ ಕಾಲೇಜು ಪೆರುವಾಜೆ ) ಆಟಿ ತಿಂಗಳ ಮಹತ್ವ, ಆಟಿ ತಿಂಗಳಲ್ಲಿ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳು ಅದರಿಂದ ಮನುಷ್ಯನ ಆರೋಗ್ಯಕ್ಕೆ ಸಿಗುವಂತ ಪೋಷಕಾಂಶಗಳು, ನಮ್ಮ ಪೂರ್ವಿಕರಿಂದ ಯಾಕೆ ಇಂತಹ ತಿನಸುಗಳ ಪರಿಚಯ ನಮಗೆ ಆಗಿದೆ ಮುಂತಾದ ವಿಷಯ ಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಶ್ವೇತಾ (TPM)ರವರು ಲಿಂಗಾದಾರಿತ ದೌರ್ಜನ್ಯ, ಫೋಕ್ಸೋ ಕಾಯ್ದೆ, ಬಗ್ಗೆಮಾಹಿತಿ ನೀಡಿದರು.
ಬೆಳ್ಳಾರೆ ಸೈಬರ್ ಪೊಲೀಸ್ ಅಧಿಕಾರಿ ಪೂಜಾರವರು ಸೈಬರ್ ಅಪರಾಧ, ಮಾದಕ ದ್ರವ್ಯ ಸೇವನೆ ಕುರಿತು ಜಾಗ್ರತಿ ಬಗ್ಗೆ ಮಾಹಿತಿ ನೀಡಿದರು.
ಬೆಳ್ಳಾರೆ ಸಿ.ಎಚ್.ಒ.ಕುಮಾರಿ ಹವ್ಯಶ್ರೀ ಯವರು ಆಹಾರ ಪೋಷಣೆ, ನೈರ್ಮಲ್ಯ (FNHW )ಬಗ್ಗೆ ಮಾಹಿತಿ ನೀಡಿದರು.ಒಕ್ಕೂಟ ಸದಸ್ಯೆಯರು
35 ಬಗೆಯ ವಿಧದ ಆಟಿ ಆಹಾರ ತಿನಸುಗಳನ್ನು ತಯಾರಿಸಿ ತಂದಿದ್ದರು. ಅತ್ಯುತ್ತಮ ತಿನಸು ಗಳಿಗೆ ಬಹುಮಾನ ವಿತರಿಸಲಾಯಿತು,.ಎಲ್ಲಾ ಸದಸ್ಯೆ ಯಾರಿಗೂ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಸುಜಾತ ರವರು ಬ್ಯಾಂಕ್ ಮಾಹಿತಿ ನೀಡಿದರು.
ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ಪಿ.ಡಿ.ಒರವರು,ಬಿ.ಆರ್.ಪಿ.,ಪಿ.ಆರ್.ಐ.ಜಯಲಕ್ಷ್ಮಿ, ಪಂ, ಸದಸ್ಯರು, ಒಕ್ಕೂಟ ದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಲ್.ಸಿ.ಆರ್.ಪಿ. ದಿವ್ಯಲತ ಸ್ವಾಗತಿಸಿದರು, ಎಂಬಿ.ಕೆ.ಗೀತಾಪ್ರೇಮ್ ವಂದಿಸಿದರು.
ಎಲ್.ಸಿ.ಆರ್.ಪಿ.ಶಕೀಲಾ ವೈ ಶೆಟ್ಟಿ ಮತ್ತು ಪ್ರತಿಮಾ (ಪ.ಸಖಿ)ಸಹಕರಿಸಿದರು. ಕ.ಯು.ಎಸ್.ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.