ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ ಸುಳ್ಯ,ಶ್ರೀ ಶಾರದಾ ಪ್ರೌಡ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ
ಕಾನೂನು ಅರಿವು ಕಾರ್ಯಕ್ರಮ ಅ 4 ರಂದು
ಶ್ರೀ ಶಾರದಾ ಪ್ರೌಡ ಶಾಲಾ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು ಹಾಗೂ ಸುಳ್ಯ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮೋಹನ್ ಬಾಬು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕುರಿತು ಮಾಹಿತಿಯನ್ನು ನೀಡಿ ಮಾತನಾಡಿ ‘ವಿದ್ಯಾರ್ಥಿಗಳು ತಮ್ಮ ಸಹಪಾಠಿ ವಿದ್ಯಾರ್ಥಿನಿಯರೊಂದಿಗೆ ಯಾವುದೇ ರೀತಿಯ ಅಹಿತಕರ ಸನ್ನಿವೇಶಗಳಿಗೆ ಭಾಗಿಯಾಗದೆ ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವಂತೆ ಅರಿವು ನೀಡಿದರು. ಅಲ್ಲದೆ ಯಾವುದೇ ಕೆಟ್ಟ ಘಟನೆಗಳು ಸಂಭವಿಸಿದ್ದಲ್ಲಿ ಕಾನೂನಿನಲ್ಲಿ ಯಾವುದೆಲ್ಲ ಶಿಕ್ಷೆಗಳು ಈ ಅಪರಾಧಗಳಿಗೆ ಇರುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿದರು. ಶಿಕ್ಷಕರುಗಳು ಕೂಡ ವಿದ್ಯಾರ್ಥಿಗಳಿಗೆ ಕೆಟ್ಟ ಚಟುವಟಿಕೆಗಳಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿರಬೇಕು ಎಂದು ಸಲಹೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯ ರಾದ ಶ್ರೀಮತಿ ಭಾರತಿ ರವರು ವಹಿಸಿದ್ದರು.















ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ.ಕೆ,ಹಾಗೂ ಪ್ಯಾನಲ್ ವಕೀಲರಾದ ಚಂದ್ರಶೇಖರ ಉದ್ದಂತಡ್ಕ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲರಾದ ಶ್ರೀಮತಿ. ಸುಮ ಕೆ.ಎಸ್ ರವರು ಪೋಸ್ಕೋ ಕಾಯ್ದೆಯ ಕುರಿತು ಮತ್ತು ಅದರ ಪರಿಣಾಮಗಳ ಕುರಿತು ತರಬೇತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಭಾರತಿ ಬಿ ಸ್ವಾಗತಿಸಿ ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ಕಾರ್ಯಕ್ರಮ ನಿರೂಪಿಸಿ ಶಿಕ್ಷಕಿ ಮೈತ್ರಿ ವಂದಿಸಿದರು.










