ಎಲಿಮಲೆ : ಈದ್ ಮೀಲಾದ್ ಸಮಿತಿ ರಚನೆ

0

ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಎಲಿಮಲೆಯಲ್ಲಿ ಎಲಿಮಲೆ ಜಮಾಅತರ ಮೀಲಾದ್ ಸಮಿತಿ 2025 ನೂತನ ಸಮಿತಿ ರಚನೆ ನೂರುಲ್ ಹುದಾ ಮದ್ರಸದಲ್ಲಿ ಸ್ಥಳೀಯ ಮುದರ್ರಿಸರಾದ ಕುಂಜಿಲಂ ಸಯ್ಯದ್ ಮುಹ್ಸಿನ್ ತಂಙಳ್ ರವರ ನೇತೃತ್ವದಲ್ಲಿ ರಚನೆಗೊಂಡಿತು.

ಗೌರವಾಧ್ಯಕ್ಷರಾಗಿ ಸಯ್ಯದ್ ಮುಹ್ಸಿನ್ ಸೈದಲವಿ ಕೋಯ ಅಲ್ ಬುಖಾರಿ ಕುಂಜಿಲಂ ತಂಙಳ್,ಚಯರ್ಮೇನ್ ಅಬೂಬಕ್ಕರ್ ಪಾಣಾಜೆ,
ಅಧ್ಯಕ್ಷರಾಗಿ ಹಾರಿಸ್ ಪಳ್ಳಿಕಲ್,ಪ್ರಧಾನ ಕಾರ್ಯದರ್ಶಿಯಾಗಿ ಫೈಝಲ್ ಜೀರ್ಮುಕಿ,ಕೋಶಾಧಿಕಾರಿಯಾಗಿ ಅಶ್ರಫ್ ಜಿ ಎ ಕೆ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸೂಫಿ ಎಲಿಮಲೆ ಹಾಗೂ
ಹಸನ್ ಹರ್ಲಡ್ಕ,ಜೊತೆ ಕಾರ್ಯದರ್ಶಿಗಳಾಗಿ ಬಾತಿಶಾ ಹಾಜಿ ಜೀರ್ಮುಕಿ, ಸಿದ್ದೀಕ್ ಎಲಿಮಲೆ, ಮೀಡಿಯಾ ಕಂಟ್ರೋಲರ್ ಸಾಬಿತ್ ಹಿಕಮಿಯವರು ಆಯ್ಕೆಯಾದರು. ಸಮಿತಿಗೆ 23 ಮಂದಿಯನ್ನು ಸದಸ್ಯರಾಗಿ ಆರಿಸಲಾಯಿತು.


ಜಮಾಅತ್ ಕಮಿಟಿಯ ಅಧೀನದಲ್ಲಿ ಕಾರ್ಯಾಚರಿಸಲಿರುವ ಮೀಲಾದ್ ಸಮಿತಿಯು
ಈದ್ ಮೀಲಾದ್ ಪ್ರಯುಕ್ತ ಜೀರ್ಮುಕ್ಕಿ ಹಾಗೂ ಎಲಿಮಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಿದ್ದು ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಮಾಅತ್ ಕಮಿಟಿ ಅಧ್ಯಕ್ಷ ಪಾಣಾಜೆ ಅಬ್ದುಲ್ ಕಾದರ್,ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಕಿ, ಕೋಶಾಧಿಕಾರಿ ಜಿ. ಎಸ್ ಅಬ್ದುಲ್ಲ, ಸದಸ್ಯರಾದ ಅಹಮದ್ ಕುಂಞಿ, ಸೂಫಿ ಮುಸ್ಲಿಯಾರ್,ಅಬ್ದುಲ್ಲ ಜಿ.ಎ.ಕೆ.
ನುಸ್ರತ್ ಉಪಾಧ್ಯಕ್ಷರಾದ ಹೈದರ್ ಹಾಜಿ, ಅಬ್ದುಲ್ ಖಾದರ್ .
ಹಿರಿಯರಾದ ಮಹಮ್ಮದ್ ಕುಂಞಿ ಮೇಲೆಬೈಲು, ಮಹಮ್ಮದ್ ಹಾಜಿ ಹರ್ಲಡ್ಕ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಸೂಫಿ ಎಲಿಮಲೆ ಸ್ವಾಗತಿಸಿ ಸಯ್ಯಿದ್ ಕುಂಜಿಲಂ ತಂಙಳ್ ರವರು ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಸಲಹೆ ನೀಡಿ ದುವಾಶೀರ್ವಚನ ನೀಡಿದರು.