ಸುಳ್ಯ ಪೋಲೀಸ್ ಠಾಣೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಯೋಜಕರ ಸಭೆ
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವ ಆಯೋಜಕರ ಸಭೆಯು ಸುಳ್ಯ ಪೋಲೀಸ್ ಠಾಣೆಯಲ್ಲಿ ಆ.6ರಂದು ನಡೆಯಿತು.















ಠಾಣೆಯ ಸಬ್ ಇನ್ ಸ್ಪೆಕ್ಟರ್ ಸಂತೋಷ್ ರವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಸುಳ್ಯ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ಆಚರಿಸುವ ಸಮಿತಿಯವರು ಭಾಗವಹಿಸಿದ್ದರು. ಎಸ್.ಐ. ಸರಸ್ವತಿ ಉಪಸ್ಥಿತರಿದ್ದರು.

ಸಭೆಯಲ್ಲಿ ಮಾಹಿತಿ ನೀಡಿದ ಎಸ್.ಐ. ಸಂತೋಷ್ ರವರು “ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮ ಸಂಘಟಿಸುವ ಜಾಗದ ಮಾಲಕರ ಅಥವಾ ಸಂಸ್ಥೆಯವರ ಅನುಮತಿ ಪಡೆಯಬೇಕು. ಡಿಜೆ ಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನಿಗದಿ ಪಡಿಸಿದ ಸಮಯದೊಳಗೆ ಕಾರ್ಯಕ್ರಮ ಮುಗಿಸಬೇಕು. ಧ್ವನಿವರ್ಧಕ ಎರಡು ಸೌಂಡ್ ಬಾಕ್ಸ್ ಹಾಗೂ ಹಾರ್ನ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಯಮ ತಪ್ಪಿದರೆ ಆಯೋಜಕರೇ ಹೊಣೆ ಹೊರಬೇಕು. ಸ್ವಯಂ ಸೇವಕರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು ಹಾಗೂ ಅವರ ವಿವರವನ್ನು ಮೊದಲೇ ನಮಗೆ ಸಲ್ಲಿಸಬೇಕು. ವಾಹನ ಸಂಚಾರ ಹಾಗೂ ಸಾರ್ವಜನಿಕ ರಿಗೆ ಕಾರ್ಯಕ್ರಮ ದಿಂದ ಸಮಸ್ಯೆ ಆಗುವಂತಿರಬಾರದು. ಕಾರ್ಯಕ್ರಮದ ಪೂರ್ಣ ವಿವರ ಸಲ್ಲಿಸಬೇಕು. ಬ್ಯಾನರ್ ಇತ್ಯಾದಿ ಅಳವಡಿಕೆಗೆ ಪಂಚಾಯತ್ ಪರವಾನಗಿ ಕಡ್ಡಾಯ. ಮಹಿಳೆಯರ ಸುರಕ್ಷತೆಯನ್ನು ಪಾಲಿಸಬೇಕು. ಇತ್ಯಾದಿ ಮಾಹಿತಿ ನೀಡಿದರಲ್ಲದೆ, ನಿಯಮ ಮೀರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾದೀತು. ಆದ್ದರಿಂದ ಸೌಹಾರ್ದತೆಗೆ ಆದ್ಯತೆ ನೀಡಿ, ಇತಿಮಿತಿಯೊಳಗೆ ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸೋಣ ಎಂದರು.










