ಸುಳ್ಯದಲ್ಲಿ ಜನಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳ ಸಭೆ

0

ಸುಜ್ಞಾನ ನಿಧಿ, ಶಿಷ್ಯ ವೇತನ ಹಾಗೂ ಸರಕಾರಿ ಶಾಲೆಗಳಿಗೆ ಶಿಕ್ಷಕರ ಮಂಜೂರಾತಿ ಪತ್ರ ವಿತರಣೆ

ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಧರ್ಮಸ್ಥಳ ಯೋಜನೆ ಮುಂದಾಗಿರುವುದು ಅಭಿನಂದನೀಯ : ಕು.ಭಾಗೀರಥಿ ಮುರುಳ್ಯ

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಪದಾಧಿಕಾರಿಗಳ ಸಭೆ ಹಾಗೂ ಸುಜ್ಞಾನ ನಿಧಿ ಶಿಷ್ಯ ವೇತನ ಮತ್ತು ಜ್ಞಾನದೀಪ ಶಿಕ್ಷಕರ ಮಂಜೂರಾತಿ ಪತ್ರಗಳ ವಿತರಣಾ ಕಾರ್ಯಕ್ರಮ ಅ. 7ರಂದು ಸುಳ್ಯದ ಯೋಜನಾ ಕಚೇರಿಯಲ್ಲಿ ನಡೆಯಿತು.

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರ್ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ವಿಧಾನ ಸಭಾ ಕ್ಷೆತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರು ಮಾತನಾಡಿ ಧರ್ಮಸ್ಥಳ ಯೋಜನೆಯ ಪ್ರಯೋಜನ ವನ್ನು ಸ್ವತ ನಾನು ಪಡೆದುಕೊಂಡಿದ್ದೇನೆ. ಸರಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಕರನ್ನು ಒದಗಿಸಿಕೊಟ್ಟು ಸರಕಾರಕ್ಕೆ ಸಹಕಾರ ನೀಡುತ್ತಿರುವುದು ಅಭಿನಂದನೀಯ.


ಈ ಭಾಗದ ಕೃಷಿಕರು ಅಡಿಕೆ ಬೆಳೆಗೆ ಬಾಧಿಸಿರುವ ರೋಗದಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಯೋಜನೆಯು ಕೃಷಿಕರ ಸಮಸ್ಯೆ ಪರಿಹರಿಸುವ ಕಾರ್ಯಕ್ಕೂ ಮುಂದಾಗಲಿ. ಕೃಷಿಕರ ಸಮಸ್ಯೆ ಪರವಾಗಿ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ
ಯೋಜನೆಯ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಅವರು ವಿತರಿಸಿದರು.

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ರವರು ಮಾತನಾಡಿ ಯೋಜನೆ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಕ್ರಮಮಾಡಿಕೊಂಡು ಬರುತ್ತಿದ್ದು ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಬೇಡಿಕೆ ಇರಿಸಲಾಗಿದ್ದು ಸುಮಾರು 42 ಶಿಕ್ಷಕರನ್ನು ಈ ಬಾರಿ ಒದಗಿಸುವ ಬೇಡಿಕೆ ಇರಿಸಲಾಗಿತ್ತು. ಜ್ಞಾನದ ದೀಪ ಹಚ್ಚುವ ಕಾರ್ಯ ಯೋಜನೆಯಿಂದಾಗಿದೆ ಎಂದು ಹೇಳುವುದರೊಂದಿಗೆ ಮಂಜೂರಾತಿ ಪತ್ರ ವಿತರಿಸಿದರು.

ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ಸುರೇಶ ಕಣೆಮರಡ್ಕ,
ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಪಿ. ಸಿ. ಜಯರಾಮ, ವಿಶ್ವನಾಥರೈ ಕಳಂಜ, ಶ್ರೀಮತಿ ವಿಮಲಾ ರಂಗಯ್ಯ,
ಭವಾನಿಶಂಕರ ಅಡ್ತಲೆ,
ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ,ಜನಜಾಗೃತಿ ವೇದಿಕೆಯ ಯೋಜನಾ ನಿರ್ದೇಶಕ ಗಣೇಶ್ ಉಪಸ್ಥಿತರಿದ್ದರು.
ಗೋಪಾಲ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು.
ಯೋಜನಾಧಿಕಾರಿ ಮಾಧವ ಗೌಡ ರವರು ಯೋಜನೆಯ ವತಿಯಿಂದ ವಾರ್ಷಿಕವಾಗಿ ಹಮ್ಮಿಕೊಳ್ಳುವ ಜನಪರ ಕಾರ್ಯಕ್ರಮದ ಕುರಿತು ಅಂಕಿ ಅಂಶಗಳೊಂದಿಗೆ ಪ್ರಾಸ್ತಾವಿಕ ಮಾತಿನೊಂದಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆಯು ನಡೆಯಿತು.
ತಾಲೂಕು ವಲಯವಾರು ಮೇಲ್ವಿಚಾರಕರು ವೇದಿಕೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದ ವರದಿ ವಾಚಿಸಿದರು.
ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಕುರಿತು ವಿಚಾರ ವಿಮರ್ಶೆ ಮಾಡಲಾಯಿತು.


ವೇದಿಕೆಯ ವತಿಯಿಂದ ವಾರ್ಷಿಕವಾಗಿ ನಡೆಸಲ್ಪಡುವ ಕಾರ್ಯಕ್ರಮದ ಸುತ್ತೋಲೆ ಬಗ್ಗೆ ಯೋಜನಾ ನಿರ್ದೇಶಕ ಗಣೇಶ್ ವಿವರ ನೀಡಿದರು.
ಜನಜಾಗೃತಿ ವೇದಿಕೆಯ ಸದಸ್ಯರು, ನವ ಜೀವನ ಸಮಿತಿ ಸದಸ್ಯರು, ಒಕ್ಕೂಟ ದ ಪದಾಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣ ಘಟಕದ ಸದಸ್ಯರು, ಮೇಲ್ವಿಚಾರಕರು,
ಸೇವಾ ಪ್ರತಿನಿಧಿಗಳು ಭಾಗವಹಿಸಿದರು.