ಸುಬ್ರಹ್ಮಣ್ಯದಲ್ಲಿ ಮೆಸ್ಕಾಂ ಗ್ರಾಹಕರ ಜನ ಸಂಪರ್ಕ ಸಭೆ

0

ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆದ್ಯತೆ: ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಈಗಾಗಲೇ ಅಗತ್ಯವಿರುವಲ್ಲಿಗೆ ವಿದ್ಯುತ್ ಮಾರ್ಗಗಳ ಬದಲಾವಣೆ,ವಿದ್ಯುತ್ ಪರಿವರ್ತಕಗಳ ಬದಲಾವಣೆ,ಕಂಬಗಳ ಬದಲಾವಣೆ, ಕೆಲಸ ನಡಿತಾ ಇದೆ. ಮಳೆಗಾಲ ಸಮಯವಾದುದರಿಂದ ಬಹಳಷ್ಟು ವಿದ್ಯುತ್ ವ್ಯತ್ಯಯ ಆಗುವುದು ಸರ್ವೇಸಾಮಾನ್ಯ, ಆದರೆ ಗ್ರಾಹಕರ ಸಹಕಾರದೊಂದಿಗೆ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಗ್ರಾಹಕರಿಗೆ ಸುರಕ್ಷತೆಯೊಂದಿಗೆ ಗುಣಮಟ್ಟದ ವಿದ್ಯುತ್ತನ್ನು ಒದಗಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ಮಂಗಳೂರು ಮೆಸ್ಕಾಂ ವೃತ್ತದ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ನುಡಿದರು.


ಆ.6 ರಂದು ಸುಬ್ರಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗ ಹಾಗೂ ಸುಳ್ಯ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.


ಮೆಸ್ಕಾಂ ಗ್ರಾಹಕರ ಸಮಿತಿಯ ಸದಸ್ಯರದ ದಿನೇಶ್ ಹಾಲೆಮಜಲು ಮಾತನಾಡಿ. ಸುಳ್ಯ ಹಾಗೂ ಸುಬ್ರಹ್ಮಣ್ಯ ವಿಭಾಗದ ಜನ ಸಂಪರ್ಕ ಸಭೆ ಪ್ರತಿಬಾರಿಯೂ ಸುಬ್ರಹ್ಮಣ್ಯದಲ್ಲೇ ನಡೆಸುತ್ತಿರುವುದು ಕಂಡುಬರುತ್ತಿದೆ ಇಲ್ಲಿ ಸಾಕಷ್ಟು ಸಮಯಗಳಿಂದ ಅಧಿಕಾರಿಗಳು ಬಿಟ್ಟರೆ ಜನ ಸೇರುವುದು ಬಹಳ ಕಡಿಮೆ. ಅದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆಯನ್ನು ಮಾಡಬೇಕು. ಹಾಗೂ ಸಹಕಾರಿ ಸಂಘಗಳನ್ನು ಬಳಸಿಕೊಂಡು ಅಲ್ಲಿ ಇರುವ ರೈತರನ್ನು ಕೂಡಿಸಿಕೊಂಡು ಸಭೆ ನಡೆಸಬೇಕು ಸಮಸ್ಯೆಗಳಿರುವುದು ಪೇಟೆಯಲ್ಲಿಲ್ಲ ಹಳ್ಳಿಗಳಲ್ಲಿ ಹಳ್ಳಿಯ ಜನರಿಗೆ ಇಷ್ಟೊಂದು ದೂರ ಬರಲು ಅನಾನುಕೂಲವಾಗುತ್ತದೆ ಇದಕ್ಕಾಗಿ ನಾನು ಈ ಹಿಂದೆ ಇಂಧನ ಸಚಿವರಿಗೆ ಪತ್ರ ಬರೆದಿದ್ದೆ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನ ಸಂಪರ್ಕ ಸಭೆ ನಡೆಯಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಮೆಸ್ಕಾಂ. ವತಿಯಿಂದ ಸುಬ್ರಹ್ಮಣ್ಯ ಹಾಗೂ ಗುತ್ತಿಗಾರಿಗೆ ತುರ್ತು ಸೇವೆಗಳಿಗಾಗಿ ಮೆಸ್ಕಾಂ ವಾಹನ ಇರುವುದು ಮಾಹಿತಿ ಇದೆ ಆದರೆ ಅದರ ಕೆಲಸ ವ್ಯಾಪ್ತಿ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿ ಎಂದು ರಂಜಿತ್ ವಳಲಂಬೆ. ಅಧಿಕಾರಿಗಳನ್ನು ಕೇಳಿದರು. ಹಾಗೂ ವಳಲಂಬೆ ಬಳಿ ಎರಡು ವಿದ್ಯುತ್ ಕಂಬಗಳು ತುಂಡಾಗಿ ಅರ್ಧದಲ್ಲಿ ನಿಂತಿವೆ, ಅದನ್ನು ಕೂಡ ಸರಿಪಡಿಸಿ ಎಂದರು. ಕಳೆದ ಬಾರಿ ಸುಳ್ಯದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ತಾವುಗಳು ಹೇಳಿದ್ದೀರಿ, ಮರಕಟ್ಟಿಂಗ್ ಮಿಷನ್ ಕಳುಹಿಸಿಕೊಡುತ್ತೇವೆ ಅಂತ ಇದುವರೆಗೆ ಕಳುಹಿಸಿ ಲ್ಲ,
ಗುತ್ತಿಗಾರಿನ 33 ಕೆವಿ ಸಬ್ ಸ್ಟೇಷನ್ ನಲ್ಲಿ ಅನೇಕ ರೀತಿಯ ಸಮಸ್ಯೆಗಳಿದೆ ಅಲ್ಲಿರುವ ಕಚೇರಿಯಲ್ಲಿ ಬೆಳಕಿನ ವ್ಯವಸ್ಥೆ ಕೂಡ ಇಲ್ಲ ಎಂದು ಉದಯಕುಮಾರ್ ಹೇಳಿದರು.


ಸುಬ್ರಹ್ಮಣ್ಯ, ಗುತ್ತಿಗಾರು ಪಂಜ,ನಿಂತಿಕಲ್ಲು, ಕಡಬಕ್ಕೆ ಮುಖ್ಯ ಕೇಂದ್ರವಾಗಿರುವ ಪಂಜ ದಲ್ಲಿ 110 ಕೆ ವಿ ವಿದ್ಯುತ್ ಮುಖ್ಯಸ್ಟೇಷನ್ ಆಗಬೇಕೆಂದು ಗ್ರಾಹಕರಾದ ವಸಂತಕುಮಾರ ಕೆದಿಲ ಹಾಗೂ ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಜಮಾಲುದ್ದೀನ್ ಅಗ್ರಹಿಸಿದರು. ಗುತ್ತಿಗಾರಿನ 33 ಕೆವಿ ಸವಿರ್ಸ್ ಸ್ಟೇಷನ್ ಸಮರ್ಪಕವಾಗಿ ಕೆಲಸ ಮಾಡುತ್ತಾ ಇಲ್ಲ. ಟೆಲಿಫೋನ್ ಇಲಾಖೆ ಅವರು ಒ ಎಫ್ ಸಿ ಕೇಬಲ್ ನ್ನು ವಿದ್ಯುತ್ ಕಂಬಕ್ಕೆ ಕಟ್ಟಿರುವುದನ್ನು ಲೈನ್ ಮ್ಯಾನ್ ಗಳು ಬಿಚ್ಚಿ ಹಾಕಿರುತ್ತಾರೆ. ಇದರಿಂದ ಗ್ರಾಹಕರಿಗೆ ತುಂಬಾ ತೊಂದರೆ ಕೂಡ ಆಗಿರುತ್ತದೆ. ಕೂಡಲೇ ಅದನ್ನು ಸರಿಪಡಿಸಬೇಕೆಂದು ಉದಯಕುಮಾರ್ ದೇವಪ್ಪಜ್ಜನ ಮನೆ ಆಗ್ರಹಿಸಿದರು. ಐನೆಕಿದು, ಹರಿಹರ, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರು ಪ್ರದೇಶಗಳಲ್ಲಿ ಆಗುತ್ತಿರುವ ವಿದ್ಯುತ್ ವ್ಯತ್ಯಯ ಹಾಗೂ ಸಮಸ್ಯೆಗಳ ಬಗ್ಗೆ ಹರೀಶ ಮೆಟ್ಟಿನಡ್ಕ, ಪರಮೇಶ್ವರ ಕೆಂಬಾರೆ, ದಿನೇಶ್ ಹಾಲೆಮಜಲು, ವಿಜಯಕುಮಾರ ಅಂಙಣ ಅಧಿಕಾರಿಗಳ ಗಮನ ಸೆಳೆದರು.


ಮೆಸ್ಕಾಂ ಬಿಲ್ಲಿನಲ್ಲಿ ಆಗುತ್ತಿರುವ ವ್ಯತ್ಯಾಸ ಗುತ್ತಿಗಾರು ಭಾಗದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದಿನೇಶ್ ಸರಸ್ವತಿ ಮಹಲ್ ವಿವರಿಸಿದರು. ಮೆಸ್ಕಾಂ ನವರು ಗ್ರಾಹಕರ ಮೀಟರ್ ಕೆಟ್ಟೋಗಿ ತುಂಬಾ ಸಮಯವಾದರೂ ಬದಲಾವಣೆ ಮಾಡದೆ ಇದ್ದುದನ್ನು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಜಮಾಲುದ್ದೀನ್ ಅಧಿಕಾರಿಗಳಲ್ಲಿ ತಿಳಿಸಿದರು.
ಮಲಯಾಳದಿಂದ ಐನೆಕಿದು, ಹರಿಹರದವರೆಗೆ ಮಾರ್ಗದ ಬದಿಯಲ್ಲಿ ವಿದ್ಯುತ್ ತಂತಿಗೆ ತಾಗಿಕೊಂಡು ಇರುವ ಮರದ ಕೊಂಬೆಗಳನ್ನ ತೆಗೆಯುವಂತೆ ಸತೀಶ್ ಕೂಜುಗೋಡು ಅಗ್ರಹಿಸಿದರು. ವಿದ್ಯುತ್ ತಂತಿಗಳು ಹಾದು ಹೋಗಿರುವ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಮರದ ಕೊಂಬೆಗಳ ಕಟಿಂಗ್ ಆಗದೆ ಇನ್ನೂ ಬಾಕಿ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಮಾಡುವಂತೆ ಅಗ್ರ ಹಿಸಲಾಯಿತು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ,, ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ ಸಪಲ್ಯ, ಸುಳ್ಯ ಉಪ ವಿಭಾಗದ ಹರೀಶ್ ನಾಯ್ಕ ಉಪಸ್ಥಿತರಿದ್ದರು.
ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ದಿನೇಶ್ ಹಾಲೆಮಜಲು, ಜಮಾಲುದ್ದೀನ್ , ಕೃಷ್ಣಪ್ಪ ನಾಯ್ಕ ಸಹಾಯಕ ಇಂಜಿನಿಯರ್ ಗಳಾದ ಹರಿಕೃಷ್ಣ ಕೆ ಜಿ, ಚಿದಾನಂದ ಕೆ, ಸುಪ್ರೀತ್ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಪ್ರಸಾದ ಕೆ.ವಿ, ಅಭಿಷೇಕ್, ಮಹೇಶ್, ಸುನಿತಾ ಮತ್ತು ಕಚೇರಿ ಹಿರಿಯ ಸಹಾಯಕರಾದ ಗಣೇಶ್, ಹಾಗೂ ಅನುರಾಧ ಮತ್ತಿತರರು ಉಪಸಿತರಿದ್ದರು.