ತಮಿಳು ಕಾರ್ಮಿಕರ ಸಮಸ್ಯೆಗೆ ನಿರಂತರ ಹೋರಾಟ ಮಾಡಿದವರು ಚಂದ್ರಲಿಂಗಂ – ಬಿ.ರಮಾನಾಥ ರೈ
ಕಾರ್ಮಿಕ ಮುಖಂಡ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಐವರ್ನಾಡಿನ ಬೇಂಗಮಲೆ ಚಂದ್ರಲಿಂಗಂರವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ,ನುಡಿನಮನ ಕಾರ್ಯಕ್ರಮವು ಆ.7 ರಂದು ಸಂಜೆ ಐವರ್ನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈಯವರು ದೀಪ ಪ್ರಜ್ವಲಿಸಿ ದಿ.ಚಂದ್ರಲಿಂಗಂರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ರಮಾನಾಥ ರೈಯವರು ಚಂದ್ರಲಿಂಗಂ ರವರು ತನ್ನ ಸಮುದಾಯದ ಜನರ ಸಮಸ್ಯೆಗಳಿಗೆ ನಿರಂತರವಾಗಿ ಪ್ರಾಮಾಣಿಕ ಹೋರಾಟ ಮಾಡಿದವರು.
ಸಮಾಜದ,ಸಮುದಾಯದ ಸಮರ್ಥ ನಾಯಕತ್ವ ವಹಿಸಿಕೊಂಡು ತಮಿಳು ಕಾರ್ಮಿಕರ ಜಾತಿ ಸರ್ಟಿಫಿಕೇಟ್ ಗಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ.ಶ್ರೀಲಂಕಾದಿಂದ ಬಂದ ಪುನರ್ವಸತಿದಾರರಿಗೆ ಎಲ್ಲಿಯೂ ಜಾತಿ ಸರ್ಟಿಫಿಕೆಟ್ ಸಿಕ್ಕಿಲ್ಲ ಆದರೆ ಇಲ್ಲಿ ಸಿಕ್ಕಿದೆ.ಇದರಿಂದ ತಮಿಳು ಕಾರ್ಮಿಕರಿಗೆ,ಕಾರ್ಮಿಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಲು ಬಹಳಷ್ಟು ಅನುಕೂಲವಾಗಿದೆ.

ಚಂದ್ರಲಿಂಗಂ ಹಾಗೂ ಶಿವಕುಮಾರ್ ರವರು ಜಾತಿ ಸರ್ಟಿ ಫಿಕೇಟ್ ಬಗ್ಗೆ ನನ್ನ ಭರವಸೆಯನ್ನು ನಂಬಿಕೊಂಡು ಹಲವು ಬಾರಿ ನನ್ನನ್ನು ಭೇಟಿ ಮಾಡಿದ್ದಾರೆ.
ಇದರಿಂದ ಜಾತಿ ಸರ್ಟಿಫಿಕೇಟ್ ಸರಕಾರ ಮಂಜೂರು ಮಾಡಿದೆ ಎಂದು ಹೇಳಿದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮರವರು ಮಾತನಾಡಿ
ಚಂದ್ರಲಿಂಗಂರವರು ಗ್ರಾಮ ಪಂಚಾಯತ್ ಸದಸ್ಯರಾಗಿ,ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದವರು.















ಸಾಮಾಜಿಕ ಸೇವೆಯ ಮುಖಾಂತರ ಸಮಾಜದಲ್ಲಿ ಕಾರ್ಮಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದರು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ನ್ಯಾಯವಾದಿ ಎಂ.ವೆಂಕಪ್ಪ ಗೌಡರವರು ಮಾತನಾಡಿ
ಗಟ್ಟಿ ಸ್ವರ ಇದ್ದ ನಾಯಕ ಚಂದ್ರಲಿಂಗಂ.ಇಡೀ ತಮಿಳು ಸಮುದಾಯದವರು ಇವರ ಮೇಲೆ ನಂಬಿಕೆ ಇಟ್ಟಿದ್ದರು.ರಮಾನಾಥ ರೈಯವರ ಮೇಲೆ ಅಪಾರ,ಪ್ರೀತಿ ನಂಬಿಕೆ ಇಟ್ಟಿದ್ದ ಇವರು ಕಾರ್ಮಿಕರಿಗೆ ಸಮಸ್ಯೆಗಳು ಬಂದಾಗ ರಮಾನಾಥ ರೈಯವರನ್ನು ಭೇಟಿ ಮಾಡಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.ಜಾತಿ ಸರ್ಟಿಫಿಕೆಟ್ ಸಿಗಲು ಬಹಳಷ್ಟು ಹೋರಾಟ ಮಾಡಿ ಯಶಸ್ವಿ ಗಳಿಸಿದ್ದಾರೆ .ಇವರು ನಂಬಿಕೆಗೆ ಅರ್ಹರಾದವರು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಭರತ್ ಮುಂಡೋಡಿಯವರು ಮಾತನಾಡಿ
ತಮಿಳು ಸಮುದಾಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದವರು ಚಂದ್ರಲಿಂಗಂರವರು.
ಇವರು ಸಮಾಜಕ್ಕಾಗಿ,ಸಮಸ್ಯೆಗಳ ಪರಿಹಾರಕ್ಕಾಗಿ ದುಡಿದವರು.ಹೃದಯ ಶ್ರೀಮಂತಿಕೆ ಇದ್ದವರು ಎಂದು ಹೇಳಿದರು.
ಗ್ರಾಮಸ್ಥರ ಪರವಾಗಿ ಶಿವರಾಮ ನೆಕ್ರೆಪ್ಪಾಡಿ,ಕಾರ್ಮಿಕರ ಪರವಾಗಿ ಲೋಕನಾಥ ಕಲ್ಲೋಣಿ ಯವರು ನುಡಿನಮನ ಸಲ್ಲಿಸಿದರು.
ಚಂದ್ರಲಿಂಗಂರವರ ಪುತ್ರಿ ಚರಣ್ಯರವರು ತನ್ನ ತಂದೆಯು ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಹೋರಾಟ ಮಾಡಿದ ದಿನಗಳನ್ನು ನೆನಪಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸಿದರು.ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಚಂದ್ರಲಿಂಗಂರವರ ಪತ್ನಿ ಚಂದ್ರಕಾಂತಿ,ಪುತ್ರರಾದ ಚರಣ್ ಪ್ರಸಾದ್,ಅನಿಲ್ ಕುಮಾರ್,ಪುತ್ರಿ ಚಾರ್ಮಿಳಾ ಉಪಸ್ಥಿತರಿದ್ದರು.
ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ಐವರ್ನಾಡು ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಸಂಘದ ನಿರ್ದೇಶಕರು,ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಕಾಂಗ್ರೆಸ್ ಮುಖಂಡರಾದ ಪಿ.ಎಸ್.ಗಂಗಾಧರ,ಸುರೇಶ್ ಅಮೈ,ಭವಾನಿಶಂಕರ ಕಲ್ಮಡ್ಕ, ಜಯಪ್ರಕಾಶ್ ನೆಕ್ರೆಪ್ಪಾಡಿ,ಶಶಿಧರ ಎಂ.ಜೆ, ಸರಸ್ವತಿ ಕಾಮತ್, ನಂದರಾಜ ಸಂಕೇಶ,ಗಫೂರ್ ಕಲ್ಮಡ್ಕ,ವಿಶ್ವನಾಥ ರೈ ಕಳಂಜ, ಹಾಗೂ ಶಾಂತಾರಾಮ ಕಣಿಲೆಗುಂಡಿ, ನವೀನ್ ಕುಮಾರ್ ಸಾರಕರೆ, ಶಾಫಿ ಕುತ್ತಮೊಟ್ಟೆ ಹಾಗೂ ಗ್ರಾಮಸ್ಥರು,ತಮಿಳು ಕಾರ್ಮಿಕರು ಉಪಸ್ಥಿತರಿದ್ದರು.
ಆಗಮಿಸಿದ ನೂರಾರು ಜನರು ಚಂದ್ರಲಿಂಗಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕನ್ನದಾಸನ್ ದರ್ಖಾಸ್ತು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.










