ಉಬರಡ್ಕದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಉಬರಡ್ಕ ಮಿತ್ತೂರಿನ ಶ್ರೀ ನಂದಿನಿ ಮಹಿಳಾ ಮಂಡಲದ ವತಿಯಿಂದ 15 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಅರ್ಚಕರಾದ ವೆಂಕಟ್ರಮಣ ಭಟ್ ಮತ್ತು ಮಧ್ವರಾಜ್ ಭಟ್ ರವರ ವೈದಿಕತೆಯಲ್ಲಿ ಆ.8 ರಂದು ಉಬರಡ್ಕದ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು. ಮಹಿಳಾ ಮಂಡಲದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಗಿರಿಧರ ದಾಸ್ ರವರು ಸಹಕರಿಸಿದರು.