ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತದಲ್ಲಿ ಶ್ರೀ ವರಮಹಾಲಕ್ಷ್ಮಿಪೂಜೆ, ನೂರಾರು ಮಂದಿ ಭಾಗಿ

0

ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತದಲ್ಲಿ ಆ.8 ರಂದು ಹದಿನೇಳನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿಪೂಜೆ ನಡೆಯಿತು.

ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಿದ್ದಿಧಾತ್ರಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯದ ಮಹಾಪೂಜೆ ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.


ಕಾರ್ಯಕ್ರಮ ಯಶಸ್ವಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಶ್ರೀಮತಿ ನಿರ್ಮಲ ಪದನಾಭ ಪರಮಲೆ, ಸದಸ್ಯರುಗಳಾದ ಶ್ರೀಮತಿ ಚಂದ್ರಕಲಾ ಉತ್ರಂಬೆ, ಶ್ರೀಮತಿ ರತ್ನಾವತಿ ಭುವನೇಶ್ವರಿ ಹುಲ್ಲುಕುಮೇರಿ, ರಾಜೇಶ್ ಉತ್ರಂಬೆ, ಮೋನಪ್ಪ ಗೌಡ ಕುತ್ಯಾಳ ಸೂರ್ಯಪ್ರಕಾಶ್ ಕೋಡಿಬೈಲು, ಷಣ್ಮುಖ ಅಂಬೆಕಲ್ಲು, ವೆಂಕಪ್ಪ ನಾಯ್ಕ ಅಂಜೇರಿ, ಮಹಾಬಲೇಶ್ವರ ಭಟ್, ದೇವಾಲಯದ ಸಿಬ್ಬಂದಿ ಜಯರಾಮ ಚಾರ್ಮತ ಮತ್ತಿತರರು ಸಹಕರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಮಾವಿನಕಟ್ಟೆ, ಸದಸ್ಯರು, ಅಭಿ ಸಮಿತಿ ಸದಸ್ಯರು, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.