ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ನೇತೃತ್ವದಲ್ಲಿ ಸೌಹಾರ್ದ ಸಮಿತಿ ಕೊಳ್ತಿಗೆ, ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೋತ್ಸವ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ನೇತೃತ್ವದಲ್ಲಿ ಸೌಹಾರ್ದ ಸಮಿತಿ ಕೊಳ್ತಿಗೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡನೆಡುವ ಕಾರ್ಯಕ್ರಮ ಆ. 8ರಂದು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಇದರ ವಠಾರದಲ್ಲಿ ನಡೆಯಿತು.


ವಿವಿಧ ಜಾತಿಯ ಗಿಡಗಳನ್ನು ಶಾಲೆಯ ಆವರಣದ ಒಳಗಡೆ ಹಾಗೂ ಮೊಗಪ್ಪೆ ರಸ್ತೆ ಬದಿಯಲ್ಲಿ ನೆಡಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗದ ಪ್ರಥಮ ಉಪಾಧ್ಯಕ್ಷ ಲ. ದಯಾಕರ ಆಳ್ವ, ಸ್ಥಾಪಕಾಧ್ಯಕ್ಷ ಲ. ವಿಟ್ಟಲ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಲ. ಉಷಾ ಬಿ. ಭಟ್ MJF, ಕೋಶಾಧಿಕಾರಿ ಲ. ಎಮ್.ಕೆ ಶೆಟ್ಟಿ, ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಸ್ಥಾಪಕಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು, ಅರಣ್ಯ ಇಲಾಖೆಯ ಸಿಬ್ಬಂದಿ ಸೌಮ್ಯ, ಫಾರೆಸ್ಟ್ ಗಾರ್ಡ್ ಗಳಾದ ಲಿಖಿತ ಹಾಗೂ ಸತ್ಯನ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜನಾರ್ಧನ ಪೂಜಾರಿ ಮೇರಡ್ಕ, ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಹಾಗೂ ಶಿಕ್ಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.