














ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಮುತ್ತಪ್ಪ ನಾಯ್ಕರವರು ಜು.28ರಂದು ನಿಧನರಾಗಿದ್ದು, ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಆ.8 ರಂದು ಸುಳ್ಯ ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.

ನಿವೃತ್ತ ಶಿಕ್ಷಕ ದೇವಪ್ಪ ನಾಯ್ಕ ಹೊನ್ನೇಡಿ ಮೃತರ ಬಗ್ಗೆ ಮಾತನಾಡಿದರು. ಮೃತರ ಪತ್ನಿ ಶ್ರೀಮತಿ ಶಶಿಕಲಾ, ಮಗಳು ಶ್ರೀಮತಿ ಪದ್ಮಾವತಿ, ಅಳಿಯ ರಾಮ ನಾಯ್ಕ, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳು, ಮರಾಟಿ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈಶ್ವರ ವಾರಣಾಶಿ ನಿರೂಪಿಸಿದರು.










