ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರದ ಭಾಗವಾಗಿ ವೆಬಿನಾರ್

0

ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೌಖಿಕ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನ ವಿಭಾಗದ ವತಿಯಿಂದ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ತರಬೇತಿ ಶಿಬಿರದ ಭಾಗವಾಗಿ “Tooth Tells Tales – Role of Dental Evidence” ಎಂಬ ವಿಷಯದ ಬಗ್ಗೆ webinar ನ್ನು ಆ. 8 ರಂದು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ದಂತ ವಿದ್ಯಾಲಯದ ಹಳೆ ವಿದ್ಯಾರ್ಥಿ ಹಾಗೂ ಭಾರತೀಯ ಸೇನೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಡಾ. ಅಜಯ್ ಗುಪ್ತರವರು ಭಾಗವಹಿಸಿ, Forensic Odontology ಯ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಪಾಲಿಸಬೇಕಾದ ನಿಯಮಗಳ ಕುರಿತು webinar ನಡೆಸಿದರು.

ಅಲ್ಲದೆ ಭಾರತೀಯ ಸೇನೆಗೆ ದಂತ ವೈದ್ಯರು ಸೇರ್ಪಡೆಗೊಳ್ಳಲು ಬೇಕಾಗುವ ಅರ್ಹತೆ ಹಾಗೂ ತಯಾರಿಯ ಬಗ್ಗೆಯೂ ತಿಳುವಳಿಕೆ ನೀಡಿದರು. ಕಾರ್ಯಕ್ರಮವು ವಿದಾರ್ಥಿಗಳ ಪ್ರಾರ್ಥನೆಯೊಂದಿಗೆ ಅರಂಭಗೊಂಡಿತು. ಪ್ರಾಂಶುಪಾಲರಾದ ಡಾ. ಮೋಕ್ಷಾ ನಾಯಕ್‌ರವರು ಪ್ರಾಸ್ತವಿಕವಾಗಿ ಮಾತನಾಡಿ ಶುಭಹಾರೈಸಿದರು.

ಉಪಪ್ರಾಂಶುಪಾಲೆ ಹಾಗೂ ವಿಭಾಗ ಮುಖ್ಯಸ್ಥೆ ಡಾ. ಶೈಲ ಎಂ. ಪೈ ರವರು ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿದರು. ಡಾ. ಸುಪ್ರೀಯ ಹೆಚ್. ರವರು ಸಂಪನ್ಮೂಲ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಅನಿತಾ ದಯಾಕರ್ ರವರು ನೀಡಿದರು.

ಡಾ. ಅಮೃತ ಹಾಗೂ ವಿಭಾಗ ಸಿಬ್ಬಂದಿ ಸಹಕರಿಸಿದರು. ಕಾಲೇಜಿನ ಸಿಬ್ಬಂದಿವರ್ಗ ಹಾಗೂ ಆಡಳಿತಾಧಿಕಾರಿ ಮಾಧವ ಬಿ.ಟಿ. ಯವರು ಉಪಸ್ಥಿತರಿದ್ದರು. ಪ್ರಶ್ನೋತ್ತರದ ನಂತರ ರಾಷ್ಟ್ರಗೀತೆಯ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.