ಬಾಲಕಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಎಫ್.ಐ.ಆರ್. ದಾಖಲಿಸಿದ್ದೇವೆ. ಅರೆಸ್ಟ್ ಪ್ರೊಸೀಜರ್ ಮಾಡಿ ಠಾಣೆಯಲ್ಲೆ ಜಾಮೀನು ಪಡೆದು ಬಿಟ್ಟಿದ್ದೇವೆ. ಅಲ್ಲದೆ
ತಹಶಿಲ್ದಾರ್ ರಿಗೆ ರಿಪೋರ್ಟ್ ಮಾಡಿದ್ದೇವೆ ” ಎಂದು ಸುಬ್ರಹ್ಮಣ್ಯ ಎಸ್.ಐ. ಕಾರ್ತಿಕ್ ರವರು ತಿಳಿಸಿದ್ದಾರೆ.















ಪೋಲೀಸ್ ಠಾಣೆಯ ಮೆಟ್ಟಿಲಲ್ಲಿ ಸರಸ್ವತಿ ಕಾಮತ್ ರವರು ಧರಣಿ ಕುಳಿತಿರುವ ಬಗ್ಗೆ ಪತ್ರಕರ್ತರು ಎಸ್.ಐ.ಯವರನ್ನು ಸಂಪರ್ಕಿಸಿ ವಿಚಾರಿಸಿದಾಗ, ” ಈ ಕೇಸ್ ನಲ್ಲಿ ಕಾನೂನಿನ ವ್ಯಾಪ್ತಿಯಲ್ಲಿ ಏನು ಮಾಡಬಹುದಾ ಅದನ್ನು ಮಾಡಿದ್ದೇವೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳಿಸಬೇಕು ಎಂದು ಸರಸ್ವತಿ ಕಾಮತ್ ಹೇಳುತ್ತಿದ್ದಾರೆ. ಆದರೆ ನಮಗೆ ಈ ಪ್ರಕರಣದಲ್ಲಿ ಕಾನೂನು ಪ್ರಕಾರ ಎಷ್ಟು ಮಾಡಬೇಕೋ ಅದಕ್ಕಿಂತ ಹೆಚ್ಚು ಮಾಡಿದರೆ ನ್ಯಾಯಾಲಯ ನಮ್ಮನ್ನು ಪ್ರಶ್ನೆ ಮಾಡುತ್ತೆ. ಎಸ್.ಡಿ.ಎಂ.ಸಿ.ಯವರು ಕೂಡ ಇವತ್ತು ಠಸಣೆಗೆ ಬಂದಿದ್ದರು. ನಾನು ಅವರಿಗೆ ಕಾನೂನಿನ ಸಾಧ್ಯತೆಗಳ ಬಗ್ಗೆ ವಿವರ ನೀಡಿದ್ದೇನೆ. ಅವರಿಗೆ ಮನವರಿಕೆ ಆಗಿದೆ. ಆದರೆ ಸರಸ್ವತಿ ಕಾಮತ್ ರವರು ಮಾತ್ರ ಹಠ ಹಿಡಿದು ಕುಳಿತಿದ್ದಾರೆ” ಎಂದು ಎಸ್.ಐ. ಹೇಳಿದರು.










