ಆ.19 ರಂದು ಸುಳ್ಯದಲ್ಲಿ ಮೊಸರು ಕುಡಿಕೆ ಉತ್ಸವ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆ

0

ಸಾರ್ವಜನಿಕರಿಗೆ ಧಕ್ಕೆಯಾಗದಂತೆ
ಉತ್ಸವ ನಡೆಸುವ ಬಗ್ಗೆ ಹಿಂದೂ ಮುಖಂಡರಿಂದ ಪತ್ರಿಕಾಗೋಷ್ಠಿ

ಧರ್ಮ ರಕ್ಷಣೆಗಾಗಿ ವಿಶ್ವೇಶತೀರ್ಥ ಶ್ರೀಪಾದರ ಆಶೀರ್ವಾದದಿಂದ ಹುಟ್ಟಿಕೊಂಡ
ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯದಲ್ಲಿ ಹಿಂದೂ ಬಾಂಧವರನ್ನು ಸಂಘಟಿಸುವ ಸಲುವಾಗಿ
ಶ್ರೀ ಕೃಷ್ಣ ಪರಮಾತ್ಮನ ಜನ್ಮ ದಿನಾಚರಣೆಯನ್ನು ಆಚರಿಸುವ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆಯೊಂದಿಗೆ 12 ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಅರ್ಥಪೂರ್ಣವಾದ ಶೋಭಾಯಾತ್ರೆಯೊಂದಿಗೆ ಅತ್ಯಂತ ಭಕ್ತಿ ಶ್ರದ್ದೆಯಿಂದ ಆಚರಿಸುವುದಾಗಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ತಿಳಿಸಿದರು.

ಆ. 19 ರಂದು ಮದ್ಯಾಹ್ನದ ನಂತರ ನಡೆಯಲಿರುವ ಉತ್ಸವದಉದ್ಘಾಟನೆಯನ್ನು ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ
ಡಾ. ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದಾರೆ.
ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಯವರು
ಪ್ರಧಾನ ಭಾಷಣ ಮಾಡಲಿದ್ದಾರೆ. ಸಂಘ ಚಾಲಕರಾದ ಚಂದ್ರಶೇಖರ ತಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಈ ಬಾರಿ ವಿಶೇಷವಾಗಿ ಬೆಳಗ್ಗೆ ಎಣ್ಣೆ ಕಂಬ ಏರುವ ಸ್ಪರ್ಧೆ ನಡೆಯಲಿದೆ. ಮಕ್ಕಳಿಗಾಗಿ
ಶ್ರೀಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್ ರವರು ವಿವರ ನೀಡಿದರು.

ಸುಳ್ಯದ ಪ್ರೆಸ್ ಕ್ಲಬ್ಬಿನಲ್ಲಿ
ಆ. 9ರಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು.

ಶೋಭಾ ಯಾತ್ರೆಯ ಪಥ:
ಈ ಬಾರಿಯ ಉತ್ಸವದಲ್ಲಿ ಅಟ್ಟಿ ಮಡಕೆ ಒಡೆಯುವ ಶೋಭಾ ಯಾತ್ರೆಯು ಆಕರ್ಷಕ ಕುಣಿತ ಭಜನೆ ಹಾಗೂ ಕೀಲು ಕುದುರೆ ಗೊಂಬೆಗಳು, ನಾಸಿಕ್ ಬ್ಯಾಂಡ್ ನೊಂದಿಗೆ ಸುಳ್ಯದ ಪ್ರಮುಖ ಕಡೆಗಳಲ್ಲಿ ಚೆನ್ನಕೇಶವ ದೇವಸ್ಥಾನ ಬಳಿಯಿಂದ ಹೊರಟು
ಎ. ಪಿ. ಎಂ. ಸಿ, ಆಯುರ್ವೇದಿಕ್ ಕಾಲೇಜ್ ಬಳಿ, ಕುರುಜಿಭಾಗ್, ವೇದಶ್ರೀ ಕಾಂಪ್ಲೆಕ್ಸ್, ಕೆ. ಇ. ಬಿ ಬಳಿ, ವೆಹಿಕಲ್ ಅಂಬಟೆಡ್ಕ,ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಕುರುಂಜಿಕಾರ್ ವೀಸಾ ಆರ್ಕೆಡ್, ರೈ ಇಂಡಿಯನ್ ಗ್ಯಾಸ್ ಮುಂಭಾಗ, ಶಾಸ್ತ್ರೀ ಸರ್ಕಲ್, ಕಶ್ಯಪ ಕಾಂಪ್ಲೆಕ್ಸ್, ಶ್ರೀಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಪಂಚಾಯತ್ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ
ಐಡಿಯಲ್ ಆಟೋ ವರ್ಕ್ಸ್ ಮುಂಭಾಗ, ಭಗವತಿ ಹಾರ್ಡ್ ವೇರ್ ಮುಂಭಾಗ ಮುಂತಾದ ಸ್ಥಳಗಳಲ್ಲಿ
ನಡೆಯಲಿದೆ. ದೇವಸ್ಥಾನದ ಎದುರಿನಲ್ಲಿ ವಿಶೇಷ ಆಕರ್ಷಣೆಯ ಅಟ್ಟಿ ಮಡಕೆ ಒಡೆಯುವ ಪ್ರದರ್ಶನ ವಾಗಲಿದೆ. ವಿಜೇತ ತಂಡಗಳಿಗೆ ಪ್ರಥಮ ರೂ. 15,025/-ಶಾಶ್ವತ ಫಲಕ, ದ್ವಿತೀಯ ರೂ. 10,025/-ಶಾಶ್ವತ ಫಲಕ, ತೃತೀಯ ರೂ. 7,025/-ಶಾಶ್ವತ ಫಲಕ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಸುಮಾರು 20 ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದೆ.


ಶೋಭಾಯಾತ್ರೆಯನ್ನು ಕಾನೂನು ಪ್ರಕಾರ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸಾರ್ವಜನಿಕರಿಗೆ ಧಕ್ಕೆಯಾಗದ ರೀತಿಯಲ್ಲಿ ನಡೆಸಲಿದ್ದೇವೆ ಎಂದು ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಕೋಶಾಧಿಕಾರಿ ನವೀನ್ ಎಲಿಮಲೆ, ಉಪಾಧ್ಯಕ್ಷ ಹರಿಪ್ರಸಾದ್ ಸುಲಾಯ, ಕಾರ್ಯದರ್ಶಿ ಪಾರ್ವತಿ ಕುಂಚಡ್ಕ, ಮಾತೃ ಶಕ್ತಿ ಸಂಯೋಜಕಿ ರೀನಾ ಚಂದ್ರಶೇಖರ, ದುರ್ಗವಾಹಿನಿ ಸಂಯೋಜಕಿ ವಿಶಾಲ ಸಿತಾರಾಮ, ವ್ಯವಸ್ಥಾ ಪ್ರಮುಖ್ ವರ್ಷಿತ್ ಚೊಕ್ಕಾಡಿ, ದೇವಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು.