ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಬಿಜೆಪಿಯವರ ಬಂಡವಾಳವನ್ನು ದೇಶದ ಜನತೆಯ ಮುಂದಿಟ್ಟಿದ್ದಾರೆ

0

ಮತಗಳ್ಳತನ ಮೂಲಕ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ: ಟಿ .ಎಂ. ಶಹೀದ್ ತೆಕ್ಕಿಲ್

ಲೋಕ ಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರು ಕರ್ನಾಟಕದ ಮಹಾದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ದಾಖಲೆ ಸಹಿತ ದೇಶದ ಜನತೆಯ ಮುಂದಿಟ್ಟು ಬಿ ಜೆ ಪಿ ಯವರ ಬಂಡವಾಳವನ್ನು ಬಯಲಿಗೆ ತಂದಿದ್ದಾರೆ.ಈ ರೀತಿಯ ಮತಗಳ ಕಳವು ಮಾಡಿ ಮೋಧಿಯವರು ದೇಶದ ಪ್ರಧಾನ ಯಾಗಿದ್ದಾರೆ ಎಂದು ಈಗ ಗೊತ್ತಾಗುತ್ತಿದೆ ಎಂದು ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ತೆಕ್ಕಿಲ್ ರವರು ಆ 9 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.

ಒಬ್ಬ ವ್ಯಕ್ತಿಗೆ ಒಂದು ಮತ ಎಂಬುದನ್ನು ಸಂವಿಧಾನ ಸಾರಿ ಹೇಳಿದೆ.ಆದರೆ ಲೋಕಸಭೆ ಚುನಾವಣೆಯಲ್ಲಿ ಒಬ್ಬರೇ ಹಲವು ಮತಗಳನ್ನು ಹಲವು ಕಡೆ ಗಳಲ್ಲಿ ಹಾಕುವ ಮೂಲಕ ಅಕ್ರಮ ನಡೆಸಿದ್ದಾರೆ.
ಇದಕ್ಕೆ ಕಾರಣ ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿದರಿಂದಾಗಿ ಆಗಿದೆ.


ಕರ್ನಾಟಕದಲ್ಲಿ ಇನ್ನೂ ಕೆಲವು ಕ್ಷೇತ್ರಗಳಲ್ಲಿಯೂ ಇದೇ ರೀತಿಯ ಮತಗಳವು ನಡೆದಿದೆ ಎಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ ಇದು ವಾಸ್ತವ ಸಂಗತಿಯೂ ಹಾಗಿದೆ ಎಂದು ಅವರು ಹೇಳಿದರು.
ಈ ಎಲ್ಲಾ ಆರೋಪಗಳಿಗೆ ಚುನಾವಣಾ ಆಯೋಗಕ್ಕಿಂತ ಮೊದಲು ಬಿಜೆಪಿಯೇ ಜನತೆಗೆ ಉತ್ತರ ಕೊಡಬೇಕೆಂದು ಅವರು ಆಗ್ರಹಿಸಿದರು.
ಅಧಿಕಾರಿಗಳಿಗೆ ಒತ್ತಡ ಹಾಕಿ ಈ ಕೆಲಸವನ್ನು ಚುನಾವಣಾ ಆಯೋಗ ಮಾಡಿದೆ.


ರಾಹುಲ್‌ ಗಾಂಧಿ ಅವರು ದೇಶದ ಸಾಮಾನ್ಯ ಜನರಿಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ಮ್ಯಾಟ್‌ನಲ್ಲಿ ಕೇಳಿದಾಗ ಯಾಕೆ ಅದನ್ನು ಆಯೋಗ ನೀಡುತ್ತಿಲ್ಲ? ವಿಡಿಯೋ ಸಾಕ್ಷಿಗಳನ್ನು ಯಾಕೆ ನಾಶಪಡಿಸಿದ್ದಾರೆ? ಇಷ್ಟು ದೊಡ್ಡ ಮಟ್ಟದಲ್ಲಿ ಮತದಾರರ ಗುರುತಿನ ಚೀಟಿ ಅವ್ಯವಹಾರಕ್ಕೆ ಚುನಾವಣಾ ಆಯೋಗ ಯಾಕೆ ಇಳಿದಿದೆ? ಚುನಾವಣಾ ಆಯೋಗ ಯಾಕೆ ಬಿಜೆಪಿ ಏಜೆಂಟ್ ತರ ವರ್ತಿಸುತ್ತಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದು ಚುನಾವಣಾ ಆಯೋಗದ ಕರ್ತವ್ಯವೂ ಕೂಡ ಆಗಿದೆ. ಇಂತಹ ಆರೋಪಗಳನ್ನು ಎದುರಿಸುವಂತಾದ ಪರಿಸ್ಥಿತಿ ಇಂದು ಚುನಾವಣಾ ಆಯೋಗಕ್ಕೆ ಬಂದಿದ್ದು, ಇದೀಗ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟನೆಗೆ ಚಾಲನೆ ಸಿಕ್ಕಿದಂತಾಗಿದೆ.

ಈ ವಿಷಯದ ಕುರಿತು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಈ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸ ವನ್ನು ನಾವು ಮಾಡಲಿದ್ದೇವೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಅವರು ಮಹಾದೇವಪುರ ಕ್ಷೇತ್ರದ ಮತದಾರರ ಮಾಹಿತಿ ಕೇಳಿದಾಗ ಡಿಜಿಟಲ್ ರೂಪದಲ್ಲಿ ನೀಡದೇ ಪೇಪರ್ ದಾಖಲೆಗಳನ್ನು ಕೊಟ್ಟು ಆಯೋಗ ಬೇಜವಾಬ್ದಾರಿತನ ತೋರಿದೆ.ಆದರೂ ಅಷ್ಟೊಂದು ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಪ್ರತಿಯೊಂದು ಮತದಾರರ ಫೋಟೋ,ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಿ,ಮತಗಳ್ಳತನದ ಇಂಚಿಂಚು ವಿವರಗಳನ್ನು ಅವರು ಪತ್ತೆ ಮಾಡಿದ್ದಾರೆ. ಇದಕ್ಕೆ ಅವರಿಗೆ ಆರು ತಿಂಗಳು ದೀರ್ಘ ಕಾಲ ಹಿಡಿದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ರವರು
ಸುಳ್ಯದ 110 ಕೆ ವಿ ವಿದ್ಯುತ್ ಕಾಮಗಾರಿಯ ವಿಳಂಬದ ಬಗ್ಗೆ ಮಾತನಾಡಿ ‘ಈ ಕಾಮಗಾರಿ ಬಹುತೇಕ ಮುಗಿದಿದ್ದು ಕೆಲವು ಕಡೆ ಲೈನ್ ಸಂಪರ್ಕದ ಜಾಗದ ತಕರಾರು ಗಳಿಂದ ಲೇಟಾಗು ತ್ತಿದೆ. ಈ ಬಗ್ಗೆ ನಮ್ಮ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಿ ಸಮಸ್ಯೆಗಳಿರುವ ಸ್ಥಳ ಕ್ಕೆ ಭೇಟಿ ನೀಡಿ ಅಲ್ಲಿಯ ಜನರಿಗೆ ಅರ್ಥ ಮಾಡಿಸಿ ಪರಸ್ಪರ ಮಾತುಕತೆ ಮೂಲಕ ಸರಿ ಮಾಡಬೇಕು.
ಈ ಬಗ್ಗೆ ನಾವು ಕಾಂಗ್ರೆಸ್ ನಾಯಕರ ನಿಯೋಗ ಇಂಧನ ಸಚಿವರ ಬಳಿ ತೆರಳಿ ನಮ್ಮ ಸಮಸ್ಯೆಗಳನ್ನು ತಿಳಿಸಿ ಆದಷ್ಟು ಶೀಘ್ರದಲ್ಲಿ ಈ ಯೋಜನೆ ಪೂರ್ಣ ಗೊಳ್ಳುವಂತೆ ಮಾಡಲಿದ್ದೇವೆ ಎಂದು ಹೇಳಿದರು.

ಇದಕ್ಕೆ ಪತ್ರಕರ್ತರು ಈ ರೀತಿಯ ಭರವಸೆಯ ಮಾತುಗಳನ್ನು ಜನತೆಗೆ ನೀವು ಹಲವಾರು ಸಮಯ ಗಳಿಂದ ನೀಡುತ್ತಲೇ ಬರುತಿದ್ದೀರಿ,ಆದರೆ ಕೆಲಸ ಯಾವುದು ಸುಳ್ಯದಲ್ಲಿ ಆಗುತ್ತಿಲ್ಲ ಏಕೆ?ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಉತ್ತರಿಸಿದ ಅವರು ನಮ್ಮ ಕ್ಷೇತ್ರದ ಶಾಸಕರು ಈ ಬಗ್ಗೆ ಶ್ರಮ ವಹಿಸುತಿಲ್ಲ ಎಂದು ಹೇಳಿ ಶಾಸಕರ ಕಡೆ ಬೊಟ್ಟು ತೋರಿಸಿದರು.
ಈ ಸಮಸ್ಯೆಗಳ ಬಗ್ಗೆ ಉಸ್ತುವಾರಿ ಸಚಿವರುಗಳ ಗಮನಕ್ಕೆ ನೀವು ತರಲಿಲ್ಲವೇ? ಎಂದು ಪತ್ರಕರ್ತರು ಕೇಳಿದಾಗ ಸಮಸ್ಯೆಗಳನ್ನು ನಾವು ಸಚಿವರಿಗೆ ಹೇಳಿದ್ದೇವೆ. ಅದಕ್ಕೆ ಅವರು ಶೀಘ್ರದಲ್ಲಿ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿ ಯಲ್ಲಿ ಕರ್ನಾಟಕ ರಾಜ್ಯ ಅರೆ ಭಾಷೆ ಸಾಹಿತ್ಯ ಮತ್ತು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಕಾಂಗ್ರೆಸ್ ಮುಖಂಡ ಮಹಮ್ಮದ್ ಇಕ್ಬಾಲ್ ಎಲಿಮಲೆ, ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಯೋಜನೆ ಸುಳ್ಯ ಸಮಿತಿ ಸದಸ್ಯ ಭವಾನಿ ಶಂಕರ್ ಕಲ್ಮಡ್ಕ,ಸುಳ್ಯ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.