ಚೆಂಬು : ಶ್ರೀರಾಮ ಯುವಕ ಸಂಘದ ಉದ್ಘಾಟನಾ ಕಾರ್ಯಕ್ರಮ

0

ಚೆಂಬು ಗ್ರಾಮದ ಊರು ಬೈಲಿನಲ್ಲಿ ಶ್ರೀರಾಮ ಯುವಕ ಸಂಘದ ಉದ್ಘಾಟನಾ ಕಾರ್ಯಕ್ರಮವು ಜರುಗಿತು. ಶ್ರೀರಾಮ ಯುವಕ ಸಂಘ ಊರುಬೈಲು ಚೆಂಬು ಇದರ ಉದ್ಘಾಟನೆಯನ್ನು ವಾಸುದೇವ ನಿಡಿಂಜಿ ಇವರು ನೆರವೇರಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ವಸಂತ ಊರು ಬೈಲು ಮತ್ತು ರಮೇಶ ಹುಲ್ಲು ಬೆಂಕಿ, ಹರಿಪ್ರಸಾದ್ ನಿಡಿಂಜಿ , ರವಿ ಕುಮಾರ ನಿಡಿಂಜಿ ಉಪಸ್ಥಿತರಿದ್ದರು. ರವಿಕುಮಾರ ನಿಡಿಂಜಿ ಕಾರ್ಯಕ್ರಮ ನಿರೂಪಿಸಿದರು. ಸರ್ವ ಸದಸ್ಯರ ಆಶಯದಂತೆ ವಾಸುದೇವ ನಿಡಿಂಜಿ ಯವರು ಸಂಘದ ಅಧ್ಯಕ್ಷರಾಗಿ, ರವಿಕುಮಾರ ಕಾರ್ಯದರ್ಶಿಯಾಗಿ, ದೀಕ್ಷಿನ್ ಊರುಬೈಲು ಖಜಾಂಜಿಯಾಗಿ ಮತ್ತು ರಾಘವ ಮಾರ್ಪಡ್ಕ, ಭೋಜಪ್ಪ ನಿಡಂಜಿ, ಹರಿಪ್ರಸಾದ್ ನಿಡಿಂಜಿ, ಪ್ರಶಾಂತ ಭಂಡಾರಿ ಊರುಬೈಲು, ವಸಂತ ಊರುಬೈಲು, ರಮೇಶ ಹುಲ್ಲುಬೆಂಕಿ ಗೌರವ ಸಲಹೆಗಾರರಾಗಿ ನೇಮಿಸಲಾಯಿತು.ನಂತರ ರಕ್ಷಾ ಬಂಧನ ದಿನದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸುಮಾರು 35 ಸದಸ್ಯರೊಂದಿಗೆ ಅಸ್ತಿತ್ವಗೊಂಡ ಶ್ರೀರಾಮ ಯುವಕ ಸಂಘವು ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ಚೊಚ್ಚಲ ಕಾರ್ಯಕ್ರಮವನ್ನು ಶೈಕ್ಷಣಿಕ ಸಂಸ್ಥೆಯಲ್ಲಿ ಮಾಡುವುದರೊಂದಿಗೆ ಸಂಘದ ಮೂಲ ತತ್ವ ಸಮಾಜಮುಖಿ ಸಹಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.