ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದ ವಠಾರದಲ್ಲಿ ಸ್ವಚ್ಛತಾ ಕಾರ್ಯ

0

ಶಾಂತಿನಗರ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆ. 10 ರಂದು ಹಮ್ಮಿಕೊಳ್ಳಲಾಯಿತು.

ಭಜನಾ ಮಂದಿರದ ಪರಿಸರದ ಸುತ್ತಲೂ ಕಾಡುಪೊದೆಗಳನ್ನು ಮೆಷಿನ್ ಬಳಸಿ ಸ್ವಚ್ಛ ಮಾಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಪದಾಧಿಕಾರಿಗಳು ಹಾಗೂ ಸದಸ್ಯರು, ಸ್ಥಳೀಯ ನಿವಾಸಿಗಳು ಮಹಿಳೆಯರು ಸೇರಿದಂತೆ ಸ್ವಚ್ಛತಾ ಶ್ರಮದಾ ನದಲ್ಲಿ ಪಾಲ್ಗೊಂಡರು.