ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್(ರಿ)
ಇದರ ವತಿಯಿಂದ
ಮಾಸಿಕ ಸ್ವಲಾತ್ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ ಆ.10 ರಂದು ಶಾಂತಿನಗರ ನೂರುಲ್ ಇಸ್ಲಾಂ ಮದ್ರಸಾ ಸಭಾಂಗಣದಲ್ಲಿ ನಡೆಯಿತು.
















ಮುಖ್ಯ ಪ್ರಭಾಷಣ ಹಾಗೂ ದುವಾ ನೇತೃತ್ವವನ್ನು
ಸಯ್ಯಿದ್ ತ್ವಾಹಿರ್ ಸಅದಿ ಬಾ’ಅಲವಿ ತಂಜಳ್ ಸುಳ್ಯ ರವರು ವಹಿಸಿದ್ದರು.

ಸ್ವಲಾತ್ ಕಾರ್ಯಕ್ರಮ ವನ್ನು ಪೈಚಾರ್ ಬದ್ರಿಯಾ ಜುಮ್ಮಾ ಮಸ್ಜಿದ್ ಇದರ ಖತೀಬರಾದ ಶಮೀರ್ ಅಹ್ಮದ್ ನಈಮಿ ರವರು ನಿರ್ವಹಿಸಿದರು.
ಸ್ಥಳೀಯ ಮದ್ರಸಾದ ಸದರ್ ಮುಅಲ್ಲಿಮ್ ಅಬ್ದುಲ್ ರಶೀದ್ ಝೖನಿ ಶಾಂತಿನಗರ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.

ಮದ್ರಸಾ ಕಮಿಟಿಯ ಅಧ್ಯಕ್ಷರಾದ ಹಾಜಿ ಪಳ್ಳಿ ಕುಂಞಿ ರವರು ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ಸ್ವಲಾತ್ ಮಾಸಿಕ ಕಾರ್ಯಕ್ರಮದ ಲೋಗೋ ಬಿಡುಗಡೆ ನಡೆಯಿತು. ಕಾರ್ಯದರ್ಶಿ ಅಬ್ದುಲ್ ಖಾದರ್ (ಅಂದು) ಶಾಂತಿ ನಗರ ಹಾಗೂ ಸಮಿತಿಯ ಸದಸ್ಯರು ಸ್ಥಳೀಯರು ಸಹಕರಿಸಿದ್ದರು. ಕೊನೆಯಲ್ಲಿ ತಬರುಕ್ ವಿತರಣೆ ನಡೆಯಿತು.ಸ್ಥಳೀಯ ನೂರಾರು ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










