ಎಬಿವಿಪಿ ವತಿಯಿಂದ ಸುಳ್ಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ

0

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರದ ವತಿಯಿಂದ ನಗರದ ವಿವಿಧಕಡೆ ರಕ್ಷಾಬಂಧನವನ್ನು ಆಚರಿಸಲಾಯಿತು. ಕೆವಿಜಿ ಕ್ಯಾಂಪಸ್ನಲ್ಲಿ ಎಲ್ಲಾ ಕಾಲೇಜು ಘಟಕದ ವಿದ್ಯಾರ್ಥಿಗಳು ಒಂದುಗೂಡಿ ಪರಸ್ಪರ ಸ್ನೇಹ ಮತ್ತು ಸೌಹಾರ್ದತೆಯ ಧ್ಯೋತಕವಾದ ರಕ್ಷೆಯನ್ನು ಕಟ್ಟಿಕೊಂಡರು.


ನಂತರ ನಮ್ಮೆಲ್ಲರ ರಕ್ಷಕರಾದ ಪೋಲಿಸ್ ಸಿಬ್ಬಂದಿಗಳಿಗೆ ರಕ್ಷೆ ಯನ್ನು ಕಟ್ಟಿ ಅಭಿನಂದನೆಯನ್ನು ಸಲ್ಲಿಸಿದರು.


ಈ ಸಂಧರ್ಭದಲ್ಲಿ ನಗರಾಧ್ಯಕ್ಷ ಕುಲದೀಪ್ ಪೆಲ್ತಡ್ಕ ಉಪಾಧ್ಯಕ್ಷ ಪದ್ಮಕುಮಾರ್ ಹಾಗೂ ತಾಲ್ಲೂಕು ಸಂಚಾಲಕ ನಂದನ್ ಪವಿತ್ರಮಜಲು ಹಾಗೂ ಸಕ್ರಿಯ ಕಾರ್ಯಕರ್ತರ ಭರತ್ ಅಡೂರು, ಚಿನ್ಮಯ್, ಹರ್ಷ, ಅಕ್ಷಿತ್,ಪುನೀತ್, ದೀಕ್ಷಿತ್, ಸ್ವಾತಿ,ಕಾವ್ಯ ಅವರು ಉಪಸ್ಥಿತರಿದ್ದರು.