ಅರಂಬೂರಿನ ಅಂಬಿಕಾ ಮಹಿಳಾ ಮಂಡಲದ ವತಿಯಿಂದ ಆಟಿದ ಗೌಜಿ ಕಾರ್ಯಕ್ರಮವನ್ನು ಆ. 10 ರಂದು ಆಚರಿಸಲಾಯಿತು.















ಸಂಪನ್ಮೂಲ ವ್ಯಕ್ತಿಯಾಗಿ
ಶ್ರೀಮತಿ ಯಮಲಾಕ್ಷಿ ಯವರು ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮಂಡಲದ ಸದಸ್ಯೆಯರು ಆಟಿ ತಿಂಗಳಿನಲ್ಲಿ ಮಾಡುವ ವಿವಿಧ ಆಹಾರ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ ತಂದು ಬಡಿಸಿದರು.
ಶ್ರೀಮತಿ ಶ್ಯಾಮಲಾ ರವರು ಪ್ರಾರ್ಥಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಅಮಿತಾ ರೈ ಸ್ವಾಗತಿಸಿದರು.
ಕಾರ್ಯದರ್ಶಿ ಶ್ರೀಮತಿ ವೇದಾವತಿ ವಂದಿಸಿದರು.
ಖಜಾಂಜಿ ಶ್ರೀಮತಿ ಹಾರಾವತಿ ಕೆ. ಸಿ. ಕಾರ್ಯಕ್ರಮ ನಿರೂಪಿಸಿದರು.










