ಕೃಷ್ಣ ಲೋಕದಲ್ಲಿ ವಿಹರಿಸಿದ ಉತ್ಸಾಹಿ ಪುಟಾಣಿಗಳು
ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗಮಯೂರಿ ಕಲಾಶಾಲೆ ಸುಳ್ಯ ಇದರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆಯು ಆ. 10 ರಂದು ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಿತು.
ನೂರಾರು ಪುಟಾಣಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮವು ಕೃಷ್ಣ ಲೋಕವನ್ನೇ ಸೃಷ್ಟಿಸಿತು.
















ಸ್ಪರ್ಧೆಯನ್ನು ಕಾರ್ಯಕ್ರಮದ ಬಹುಮಾನ ಪ್ರಾಯೋಜಕರಾದ ಸುಳ್ಯದ ಸೃಷ್ಟಿ ಫ್ಯಾನ್ಸಿ ಮತ್ತು ಮೊಬೈಲ್ಸ್ ಮಾಲಕ ಶೈಲೇಂದ್ರ ಸರಳಾಯ ಉದ್ಘಾಟಿಸಿದರು. ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಉಪಸ್ಥಿತರಿದ್ದರು. ಚಾನೆಲ್ ನಿರೂಪಕಿ ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಸ್ಪರ್ಧಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಚೇತನಾ ಹರೀಶ್ ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು.
ಸ್ಫರ್ಧೆಯ ನಿರ್ಣಾಯಕರಾಗಿ ಶ್ರೀಮತಿ ರಜನಿ ಶುಭಕರ, ಶ್ರೀಮತಿ ಕ್ಷಮಾ ನಾಯಕ್, ಕು. ಶ್ವೇತಾ ನೆಟ್ಟಾರು, ಶ್ರೀಮತಿ ಜಯಕೃಷ್ಣ ಬೆಟ್ಟ ಸಹಕರಿಸಿದರು. ಶ್ರೀಮತಿ ರಮ್ಯಾ ಸತೀಶ್ ಕಳಂಜ, ಶ್ರೀಮತಿ ಸೌಮ್ಯ ಆಳಕಂಲ್ಯ, ಅನಿಲ್ ಸಂಪ, ಕೌಶಿಕ್ ಬಳ್ಳಕ್ಕ, ಕು. ಸಿಂಚನಾ ಮತ್ತಿತರರು ಸಹಕರಿಸಿದರು.



