ಸವಣೂರು ವಿದ್ಯಾರಶ್ಮಿ ವಿದ್ಯಾಲಯ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಚೆಸ್ ಸ್ಪರ್ಧೆ

0


ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯನ್ನು ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ ಉದ್ಘಾಟಿಸಿದರು. ಬಳಿಕ ಆಟದಲ್ಲಿ ಗೆಲ್ಲುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿಗಳಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಯವರು ಅದ್ಯಕ್ಷ ನೆಲೆಯಲ್ಲಿ ಮಾತಾನಾಡಿ ಚದುರಂಗ ಸ್ಪರ್ಧೆಯೊಂದೇ ವ್ಯಕ್ತಿಯ ದೈಹಿಕ ಸಾಮರ್ಥ್ಯ ವನ್ನು ಹೊರತುಪಡಿಸಿ ಮಾನಸಿಕ ಮತ್ತು ಕೌಶಲ್ಯವನ್ನು ಒಳಗೊಂಡಿರುವ ಸ್ಪರ್ಧೆಯಾಗಿದ್ದು ವಿದ್ಯಾರ್ಥಿಯ ಬುದ್ಧಿಶಕ್ತಿಯ ಬೆಳವಣಿಗೆಗೆ ಸಹಾಯಕವಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಚೆಸ್ ಎಸೋಸಿಯೇಷನ್ ನ ಅಧ್ಯಕ್ಷರಾಗಿರುವ ರಮೇಶ್ ಕೋಟೆಯವರು ಚದುರಂಗ ಆಟದ ಪ್ರಾಮುಖ್ಯತೆಯನ್ನು ವಿವರಿಸಿ ಸೋಲು ಗೆಲುವು ಇದ್ದದ್ದೇ ಮಕ್ಕಳು ಸೋತಾಗ ಬೆನ್ನು ತಟ್ಟಿ ಮಕ್ಕಳನ್ನು ಉತ್ತೇಜಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿಯಾದ ಚಕ್ರಪಾಣಿಯವರು ಚೆಸ್ ಬುದ್ಧಿವಂತಿಕೆ ಮತ್ತು ಆಸಕ್ತಿಯನ್ನು ಒಳಗೊಂಡಿರುವ ಸ್ಪರ್ಧೆಯಾಗಿರುತ್ತದೆ ಎಂದು ತಿಳಿಸಿದರು.


ವೇದಿಕೆಯಲ್ಲಿ ಕಡಬ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಮಾiಚ್ಚನ್, ಸವಣೂರು ವಲಯ ಮಟ್ಟದ ಪ್ರಾಥಮಿಕ ವಿಭಾಗದ ಸಂಯೋಜಕರಾದ ಬಾಲಕೃಷ್ಣ, ಸವಣೂರು ಕ್ಷಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ್, ಚೆಸ್ ವೆಂಚರ್ ಅಕಾಡೆಮಿ ಪುತ್ತೂರು ಇಲ್ಲಿಯ ಚೆಸ್ ಟ್ರೈನರ್ ಸುರೇಶ್ ಕುಮಾರ್, ಹೈಸ್ಕೂಲ್ ವಲಯ ಮಟ್ಟದ ಸಂಯೋಜಕರಾದ ಕೃಷ್ಣಪ್ರಸಾದ್ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ನವೀನ್ ವೇಗಸ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಆಂಗ್ಲ ಉಪನ್ಯಾಸಕಿ ತೇಜಸ್ವಿ ನಿರೂಪಣೆಗೈದು, ಸಂವಿಧಾನದ ಪೀಠಿಕೆಯನ್ನು ೭ನೇ ತರಗತಿಯ ಮೋಕ್ಷ ವಾಚಿಸಿ, ಮಾನಸ ಮತ್ತು ಬಳಗ ಪ್ರಾರ್ಥನೆಯನ್ನು ಸಲ್ಲಿಸಿದರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿ, ಹೈಸ್ಕೂಲು ವಿಭಾಗದ ಸಂಯೋಜಕಿ ಗಣಿತ ಶಿಕ್ಷಕಿ ಶ್ರೀಲೇಖಾ ಶೆಟ್ಟಿ ವಂದನಾರ್ಪಣೆಗೈದರು. ದೈಹಿಕ ಶಿಕ್ಷಕರಾದ ಶಿವಪ್ರಸಾದ್ ಆಳ್ವ ಮತ್ತು ಭರತ್ ಚೆಸ್ ಪಂದ್ಯವನ್ನು ಸಂಯೋಜಿಸಿದರು.