ಸುಳ್ಯದ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಯರ 354ನೇ ಆರಾಧನಾ ಮಹೋತ್ಸವವು
ಅ. 11 ರಂದು ಬೆಳಗ್ಗೆ ಆರಂಭಗೊಂಡಿತು.
ಬೆಳಗ್ಗೆ ಶ್ರೀಹರಿ ಏಳಚ್ಚಿತ್ತಾಯ ರವರ ನೇತೃತ್ವದಲ್ಲಿ ಮಹಾಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣ ರಾಧನೆ, ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.















ಈ ಸಂದರ್ಭದಲ್ಲಿ ಶ್ರೀ ಚೆನ್ನಕೇಶವ ಭಜನಾ ಸಂಘದ ಸದಸ್ಯರಿಂದ ಭಜನೆ ಹಾಗೂ ಹರಿಕಥಾ ಕಾಲಕ್ಷೇಪವು ರಾಜೇಶ್ ರೈ ಮೇನಾಲ ಇವರಿಂದ ನಡೆಯಿತು.

ಹಾರ್ಮೋನಿಯಂನಲ್ಲಿ ವಿಜಯ್ ಮೇನಾಲ ಮತ್ತು ತಬಲ ವಾದಕರಾಗಿ ಪ್ರಶಾಂತ್ ಸುಳ್ಯ ಸಹಕರಿಸಿದರು.
ಮಠದ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ ಹಾಗೂ ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.










