ಸುಳ್ಯ : ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

0


ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಸುಳ್ಯದ ವಿವಿಧ ಕಡೆಗಳಲ್ಲಿ ಆಗಸ್ಟ್ ೧೧ ರಂದು ಆಚರಿಸಲಾಯಿತು.
ಗಣೇಶ್ ಪ್ರಿಂಟರ್ಸ್ ಸುಳ್ಯ ,ಭಟ್ ಎಸೋಸಿಯೇಟ್ ಲೆಕ್ಕ ಪರಿಶೋಧಕರ ಕಚೇರಿ, ಸರಕಾರಿ ಆಸ್ಪತ್ರೆ ಮತ್ತು ಪ್ರೆಸ್ ಕ್ಲಬ್ ಸುಳ್ಯ, ಇಲ್ಲಿ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು. ಎಲ್ಲರಿಗೂ ರಾಖಿ ಕಟ್ಟಿ ಸಿಹಿ ಹಂಚಲಾಯಿತು. ಮತ್ತು ಸರಕಾರಿ ಆಸ್ಪತ್ರೆ ಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ನೀಡಿ ರಾಖಿ ಕಟ್ಟುವುದರ ಮುಖಾಂತರ ರಕ್ಷಾ ಬಂಧನ ಆಚರಿಸಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಪುಷ್ಪಾ ಮೇದಪ್ಪ, ಕಾರ್ಯದರ್ಶಿ ಲೋಲಾಕ್ಷಿ ದಾಸನ ಕಜೆ , ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ಎ., ಗುಣವತಿ ಕೊಲ್ಲಂತಡ್ಕ , ಶಶಿಕಲಾ ಹರಪ್ರಸಾದ್, ವೀಣಾ ಮೋಂಟಡ್ಕ, ಸರಸ್ವತಿ ಕಕ್ಕಾಡು, ಮಮತಾ ಬೊಳುಗಲ್ಲು, ಸುಜಾತಾ ರೈ, ಸತ್ಯವತಿ ಅಜ್ಜಾವರ , ರಾಜೀವಿ ಪರ್ಲಿಕಜೆ ಉಪಸ್ಥಿತರಿದ್ದರು.