ಭಾರತೀಯ ಜನತಾ ಪಾರ್ಟಿ ಸುಳ್ಯಮಂಡಲ, ಮಹಿಳಾ ಮೋರ್ಚಾ ಸುಳ್ಯ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅರಂತೋಡು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ದಲ್ಲಿ ಮಹಿಳಾ ಮೋರ್ಚಾದ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮೋರ್ಚದ ಕಾರ್ಯದರ್ಶಿ ಭಾರತಿ ಪುರುಷೋತ್ತಮ, ನಿವೃತ್ತ ಶಿಕ್ಷಕಿ ಗಂಗಮ್ಮ, ಬೂತ್ ಅಧ್ಯಕ್ಷರಾದ ಯು ಎಂ ಕಿಶೋರ್ ಕುಮಾರ್ ರಕ್ಷಾಬಂಧನದ ಬಗ್ಗೆ ಮಾಹಿತಿಯನ್ನು ತಿಳಿಸಿದರು. ಸಂಘದ ಕಾರ್ಯದರ್ಶಿ ವಿಮಲಾ ಸೋಮಶೇಖರ್, ಮತ್ತು ಸದಸ್ಯರು ಉಪಸ್ಥಿತರಿದ್ದರು. ಜೊತೆಗೆ ಭಾರತೀಯ ಜನತಾ ಪಾರ್ಟಿಯ ಹಿರಿಯ ಕಿರಿಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಖಿಯನ್ನು ಕಟ್ಟಿ ಸಿಹಿತಿಂಡಿಯನ್ನು ಹಂಚಿ ಸಂಭ್ರಮಿಸಲಾಯಿತು .

























